6
Vivek Raj Poojary : ಮುಂದಿನ ವಿಧಾನ ಸಭೆ ಚುನಾವಣಾ ಹೊಸ್ತಿಲಿನಲ್ಲೇ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ಪೂಜಾರಿಗೆ(Vivek Raj Poojary) ಐಟಿ ದಾಳಿ ನಡೆದಿದೆ.
ಇಂದು ಮುಂಜಾನೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣುಗುಡ್ಡ ನಿವಾಸಿ ವಿವೇಕ್ ಪೂಜಾರಿ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬರೊಬ್ಬರಿ 2 ಕಾರುಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದಾರೆ ಎಂದು ತಿಳಿಯಲಾಗಿದೆ.
ವಿವೇಕ್ ರಾಜ್ ಪೂಜಾರಿ ಪನಾಮಾ ಸಂಸ್ಥೆಯ ಮಾಲೀಕರಾಗಿದ್ದಾರೆ. ಮಾತ್ರವಲ್ಲ ಹಲವಾರು ಉದ್ಯಮಗಳನ್ನು ಕೂಡ ನಡೆಸುತ್ತಿದ್ದಾರೆ. ಇಂದು ಮುಂಜಾನೆಯಿಂದ ವಿವೇಕ್ ಮನೆಯಲ್ಲಿ ಐ ಟಿ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
