Home » ಪುತ್ತೂರಲ್ಲಿ ಲೈಂಗಿಕ ದೌರ್ಜನ್ಯ ಕೇಸ್‌ ದಾಖಲು : ಅಪರಿಚಿತ ವ್ಯಕ್ತಿಯಿಂದ ಯುವತಿಯ ಮೈ ಕೈ ಮುಟ್ಟಿ ಕಿರುಕುಳ ..!

ಪುತ್ತೂರಲ್ಲಿ ಲೈಂಗಿಕ ದೌರ್ಜನ್ಯ ಕೇಸ್‌ ದಾಖಲು : ಅಪರಿಚಿತ ವ್ಯಕ್ತಿಯಿಂದ ಯುವತಿಯ ಮೈ ಕೈ ಮುಟ್ಟಿ ಕಿರುಕುಳ ..!

0 comments
Kabaka

Kabaka :ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ (Kabaka)ದ ಮುರ ಗ್ರಾಮದ ಬಳಿ KSRTC ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದ ಮುರ ಗ್ರಾಮದ ಬಳಿ ಗುರುವಾರ ಕೆಎ 17 ಎಫ್ 1293 ನೋಂದಣಿ ಸಂಖ್ಯೆಯ ಉಪ್ಪಳ-ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.

 

ಯುವತಿಯ ಹಿಂದೆ ಕುಳಿತಿದ್ದ ಅಪರಿಚಿತ ವ್ಯಕ್ತಿ ತನ್ನ ಕೈಗಳನ್ನು ಸೀಟ್​ಗಳ ನಡುವೆ ಇಟ್ಟು, ತನ್ನ ಸೊಂಟದ ಕೆಳಗೆ ಮುಟ್ಟಿದ್ದಾನೆ ಎಂದು ಪೊಲೀಸರಿಗೆ ಆರೋಪ ಮಾಡಿದ್ದಾಳೆ. ಅಲ್ಲದೆ, ಈ ದೌರ್ಜನ್ಯ ಕೃತ್ಯ ಎಸಗಿದವನು, ಪುತ್ತೂರಿನ ಬೊಳ್ವಾರ ಬಳಿ ಬಸ್​ನಿಂದ ಇಳಿದಿದ್ದಾನೆ ಎಂದು ತಿಳಿಸಲಾಗಿದೆ. ಘಟನೆ ಸಂಬಂಧ ದಕ್ಷಿಣ ಕನ್ನಡ ಪೊಲೀಸರು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ವರದಿಯಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ನದ್ದು ಗೃಹ ಜ್ಯೋತಿ ಅಲ್ಲ, ಸುಡುವ ಜ್ಯೋತಿ ಎಂದ ಕುಮಾರಸ್ವಾಮಿ..!!

You may also like

Leave a Comment