Home » ಕಡಬ : ಬೈಕ್-ಗೂಡ್ಸ್ ವಾಹನದ ನಡುವೆ ಅಪಘಾತ,ಬೈಕ್ ಸವಾರ ಗಂಭೀರ

ಕಡಬ : ಬೈಕ್-ಗೂಡ್ಸ್ ವಾಹನದ ನಡುವೆ ಅಪಘಾತ,ಬೈಕ್ ಸವಾರ ಗಂಭೀರ

by Praveen Chennavara
0 comments

ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರದಂದು ಕಡಬದ ಕಾಲೇಜ್ ಕ್ರಾಸ್ ನಲ್ಲಿ ಸಂಭವಿಸಿದೆ.

ಗಾಯಾಳು ಬೈಕ್ ಸವಾರನನ್ನು ಮರ್ಧಾಳ ನಿವಾಸಿ ಜೀವನ್ ಎಂದು ಗುರುತಿಸಲಾಗಿದೆ. ಕಾಲೇಜ್ ಕ್ರಾಸ್ ನಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ಗೂಡ್ಸ್ ವಾಹನವು ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ವೇಳೆ ಕಾರ್ಯಕ್ರಮ ನಿಮಿತ್ತ ಅದೇ ದಾರಿಯಿಂದ ತೆರಳುತ್ತಿದ್ದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿಯವರು ಗಾಯಾಳುವನ್ನು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು.

ಗಾಯಾಳುವಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

You may also like

Leave a Comment