Home » ಕಡಬ: ಬಾಟಲಿ ಯಿಂದ ಬಾಜಲ್ ಬಗ್ಗಿಸಿದಾಗ ಒಬ್ಬನಿಗೆ ಕಮ್ಮಿ ಸಿಕ್ತು | ರಾತ್ರಿ ಮಲಗಿದಾಗ ಬಗ್ಗಿಸಿದಾತನ ಎದೆಗೆ ಚೂರಿ ಬಿತ್ತು!!

ಕಡಬ: ಬಾಟಲಿ ಯಿಂದ ಬಾಜಲ್ ಬಗ್ಗಿಸಿದಾಗ ಒಬ್ಬನಿಗೆ ಕಮ್ಮಿ ಸಿಕ್ತು | ರಾತ್ರಿ ಮಲಗಿದಾಗ ಬಗ್ಗಿಸಿದಾತನ ಎದೆಗೆ ಚೂರಿ ಬಿತ್ತು!!

by Praveen Chennavara
0 comments

ಕಡಬ : ತಾಲೂಕಿನ ಬಂಟ್ರ ಗ್ರಾಮದ ನೆಕ್ಕಿತಡ್ಕ ಎಂಬಲ್ಲಿ ಮದ್ಯ ಹೆಚ್ಚು ನೀಡದ ಕೋಪದಲ್ಲಿ ವ್ಯಕ್ತಿಯೋರ್ವನ ಮೇಲೆ‌ ಮಲಗಿದ್ದಲ್ಲಿಗೆ ಬಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ವರದಿಯಾಗಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಕೆಟ್ಟಾಕೆರೆ ಚರಿಪರಂಬು ಎಂಬಲ್ಲಿನ ನಿವಾಸಿಗಳಾದ ಪ್ರಸಾದ್ ಹಾಗೂ ಅಜಿತನ್ ಎಂಬವರು ಕಡಬದ ನೆಕ್ಕಿತ್ತಡ್ಕದಲ್ಲಿ ಅಲೆಕ್ಸಾ ಎಂಬವರ ಮಾಲಕತ್ವದ ರಬ್ಬರ್ ತೋಟದಲ್ಲಿ ಟ್ಯಾಪರ್ ಆಗಿ ಕೆಲಸ ಮಾಡುತ್ತಿದ್ದು,ಅಜಿತನ್ ತಾನು ಬಾಡಿಗೆ ಪಡೆದುಕೊಂಡಿರುವ ಮನೆಯಲ್ಲಿ ಪ್ರಸಾದ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಪ್ರಸಾದ್ ಅಜಿತ್ ಗೆ ಹೆಚ್ಚು ಮದ್ಯ ನೀಡಿಲ್ಲ ಎಂದು ಕೋಪಗೊಂಡಿದ್ದು,ಇದೇ ಕೋಪದಿಂದ ಪ್ರಸಾದ್ ಮಲಗಿದ ಮೇಲೆ ಅವರ ಮೇಲೆ ಚೂರಿಯಿಂದ ಇರಿದಿದ್ದು,ಇದರಿಂದ ಗಂಭೀರ ಗಾಯಗೊಂಡ ಪ್ರಸಾದ್ ಅವರನ್ನು ಸ್ಥಳೀಯರಾದ ಉಮ್ಮಚ್ಚನ್,ಗಿರೀಶ್,ನಝೀರ್ ಅವರು ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಪುತ್ತೂರಿನಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಅಜಿತನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment