Home » ಕಡಬ ರೆಂಜಲಾಡಿಯಲ್ಲಿ ಮನೆ ಜಲಾವೃತ, 7 ಜನರ ರಕ್ಷಣೆ

ಕಡಬ ರೆಂಜಲಾಡಿಯಲ್ಲಿ ಮನೆ ಜಲಾವೃತ, 7 ಜನರ ರಕ್ಷಣೆ

by Praveen Chennavara
0 comments

ಕಡಬ : ನಿನ್ನೆಯಿಂದ ಎಡ ಬಿಡದೆ ರಣ ರಕ್ಕಸನಂತೆ ಆರ್ಭಟಿಸುತ್ತಿರುವ ಮಹಾ ಮಳೆಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮ ಕುಬಲಾಡಿ ಎಂಬಲ್ಲಿ ಹಳ್ಳದ ನೀರು ಮನೆಗೆ ನುಗ್ಗಿದೆ.

ಸ್ಥಳೀಯಾಡಳಿತದ ಅಧಿಕಾರಿಗಳು ಹಾಗೂ NDRF ತಂಡದವರು ಮಧ್ಯರಾತ್ರಿಯೇ ಸ್ಥಳಕ್ಕೆ ತೆರಳಿ ಮನೆ ಮಂದಿಯನ್ನು ರಕ್ಷಣೆ ಮಾಡಿದ್ದಾರೆ

ತನಿಯಪ್ಪ (54) ಭಾಗೀರಥಿ (50) ಚಂದಪ್ಪ (41), ರೇವತಿ (34) ಅರುಣಾ (15)ಅನಿತಾ (9) ಅಂಜಲಿ (6) ರಕ್ಷಿಸಲ್ಪಟ್ಟವರು.

7 ಜನರನ್ನು ರಕ್ಷಿಸಿದ್ದು ಸದ್ಯ ಅವರನ್ನು ಸಂಬಂಧಿಕಾರ ಮನೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯ ವೇಳೆ

ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ತಮಲೆ, ಗ್ರಾಮಕರಣಿಕ ಸಂತೋಷ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ವಸಂತ ಹಾಗೂ NDRF ಸಿಬ್ಬಂದಿಗಳು ಉಪಸ್ಥಿತರಿದ್ದರು

You may also like

Leave a Comment