Home » ಕಡಬ: ಅನ್ಯ ಕೋಮಿನ ವ್ಯಕ್ತಿಯಿಂದ ಹಿಂದೂ ಮಹಿಳೆಯ ಮತಾಂತರಕ್ಕೆ ಯತ್ನ!! ಹಿಂದೂ ಜಾಗರಣ ವೇದಿಕೆಯಿಂದ ದಾಳಿ-ಸ್ವಪ್ನ ಸುಂದರಿಯ ಮನೆಯಲ್ಲಿದ್ದ ಅನ್ಯ ಕೋಮಿನ ವ್ಯಕ್ತಿ ಪೊಲೀಸರ ವಶಕ್ಕೆ

ಕಡಬ: ಅನ್ಯ ಕೋಮಿನ ವ್ಯಕ್ತಿಯಿಂದ ಹಿಂದೂ ಮಹಿಳೆಯ ಮತಾಂತರಕ್ಕೆ ಯತ್ನ!! ಹಿಂದೂ ಜಾಗರಣ ವೇದಿಕೆಯಿಂದ ದಾಳಿ-ಸ್ವಪ್ನ ಸುಂದರಿಯ ಮನೆಯಲ್ಲಿದ್ದ ಅನ್ಯ ಕೋಮಿನ ವ್ಯಕ್ತಿ ಪೊಲೀಸರ ವಶಕ್ಕೆ

0 comments

ಕಡಬ:ಹಿಂದೂ ಮಹಿಳೆಯೋರ್ವರ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊರ್ವ ಇದ್ದು, ಮತಾಂತರ ನಡೆಸಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿಯ ಆಧಾರದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದ್ದು ಈ ವೇಳೆ ಮಹಿಳೆಯ ಮನೆಯಲ್ಲೇ ಇದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಡಬ ಕೋಡಿಂಬಾಳ ನಿವಾಸಿ ಹಿಂದೂ ಮಹಿಳೆಯ ಮನೆಯಲ್ಲಿ ಕ್ರಿಸ್ತಿಯನ್ ವ್ಯಕ್ತಿ ಇದ್ದು ಕಳೆದ ಹಲವು ಸಮಯಗಳಿಂದ ಆಕೆಯೊಂದಿಗೆ ಇದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಅದಲ್ಲದೇ ಮಹಿಳೆಯನ್ನು ಮತಾಂತರ ನಡೆಸಲು ಸಂಚು ರೂಪಿಸಿಲಾಗಿದೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದಾಗ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸದ್ಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಈ ಮೊದಲು ಮಹಿಳೆಯ ಮನೆಯಲ್ಲಿದ್ದ ವ್ಯಕ್ತಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಮಹಿಳೆಯ ಮನವೊಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.ಮಹಿಳೆಯ ಮಕ್ಕಳು ಅನ್ಯಧರ್ಮದ ಧಾರ್ಮಿಕ ವಸ್ತುಗಳನ್ನು ಧರಿಸುತ್ತಿರುವ ಮಾಹಿತಿಯೂ ಹಿಂದೂ ಸಂಘಟನೆಗಳಿಗೆ ಲಭಿಸಿತ್ತು. ಅದಲ್ಲದೇ ಮಹಿಳೆಗೆ ಆತನೊಂದಿಗೆ ಅನೈತಿಕ ಸಂಬಂಧವೂ ಇತ್ತೆನ್ನುವ ಬಗ್ಗೆ ಮಾತುಗಳು ಕೇಳಿಬಂದಿದೆ.

You may also like

Leave a Comment