Home » Kadaba :ಪತಿಗೆ ವಿಷಜಂತು ಕಡಿತ; ಸುದ್ದಿ ತಿಳಿದ ಪತ್ನಿ ಆಘಾತದಿಂದ ಮೃತ್ಯು

Kadaba :ಪತಿಗೆ ವಿಷಜಂತು ಕಡಿತ; ಸುದ್ದಿ ತಿಳಿದ ಪತ್ನಿ ಆಘಾತದಿಂದ ಮೃತ್ಯು

0 comments

Kadaba: ಪತಿಗೆ ವಿಷಜಂತು ಕಡಿದ ಸುದ್ದಿ ತಿಳಿದ ಪತ್ನಿ ಆಘಾತದಿಂದ ಮೃತಪಟ್ಟ ಘಟನೆಯು ನೆಲ್ಯಾಡಿ (nelyadi, Kadaba)  ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಿವೃತ್ತ ಅಂಚೆ ಸಿಬ್ಬಂದಿ ಪದ್ಮಯ್ಯ ಗೌಡ ಎಂಬವರ ಪತ್ನಿ ದೇವಕಿ(60) ಎಂದು ಗುರುತಿಸಲಾಗಿದೆ.

ಪದ್ಮಯ್ಯ ಗೌಡರಿಗೆ 05 ರಂದು ಮುಂಜಾನೆ ಕೃಷಿ ತೋಟದಲ್ಲಿ ಕೆಲಸದ ಸಂದರ್ಭ ವಿಷಜಂತು ಕಡಿದಿದ್ದು, ಕೂಡಲೇ ಮನೆಮಂದಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.ಇದೇ ವಿಚಾರದಲ್ಲಿ ಆಘಾತಗೊಂಡ ಅವರ ಪತ್ನಿಗೆ ರಾತ್ರಿ ವೇಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಅತ್ತ ತೀವ್ರ ನಿಗಾ ಘಟಕದಲ್ಲಿದ್ದ ಪದ್ಮಯ್ಯ ಗೌಡರಿಗೆ ಒಂದು ದಿನದ ಬಳಿಕ ಮಡದಿಯ ಸಾವಿನ ವಿಚಾರ ತಿಳಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು, ಅಂತ್ಯಕ್ರಿಯೆಯ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಿಸಿದ ಹೃದಯವಿದ್ರಾವಕ ಘಟನೆಗೆ ಇಡೀ ಗ್ರಾಮವೇ ಮರುಗಿತ್ತು.

ಇದನ್ನೂ ಓದಿ: ಸೊಸೆಯ ಪ್ರಾಣ ಉಳಿಸಲು ಅತ್ತೆ ಮಾಡಿದಳು ಮಹತ್ಕಾರ್ಯ! ಅಚ್ಚರಿಗೊಳಿಸುವ ಸುದ್ದಿ!!!

You may also like