Home » ಕಡಬ:ಮನೆಯಿಂದ ಹೊರಹೋದ ಯುವತಿ ಮನೆಗೆ ಬಾರದೆ ನಾಪತ್ತೆ!! ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು-ಪತ್ತೆಗೆ ಮನವಿ

ಕಡಬ:ಮನೆಯಿಂದ ಹೊರಹೋದ ಯುವತಿ ಮನೆಗೆ ಬಾರದೆ ನಾಪತ್ತೆ!! ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು-ಪತ್ತೆಗೆ ಮನವಿ

0 comments

ಕಡಬ: ಇಲ್ಲಿನ ಕೋಡಿಂಬಾಳ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವತಿಯನ್ನು ಕೋಡಿಂಬಾಳ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯ(22) ಗುರುತಿಸಲಾಗಿದೆ.

ದಿವ್ಯ ಬುಧವಾರದಂದು ಮನೆಯಿಂದ ಹೊರ ತೆರಳಿದ್ದು, ರಾತ್ರಿಯಾದರೂ ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಸಂಬಂಧಿಕರಲ್ಲಿ,ನೆರೆ ಹೊರೆಯವರಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಕಂಡುಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪತ್ತೆಗೆ ತನಿಖೆ ಮುಂದುವರಿದಿದೆ.

You may also like

Leave a Comment