Home » ಸಾಗರ: ಮುಸ್ಲಿಂ ಎಂದರೆ ಕಾಮುಕ-ಆ ಸಮುದಾಯಕ್ಕೆ ಪ್ರೀತಿ ಪ್ರೇಮದ ವಿಷಯವೇ ಗೊತ್ತಿಲ್ಲ!! ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ

ಸಾಗರ: ಮುಸ್ಲಿಂ ಎಂದರೆ ಕಾಮುಕ-ಆ ಸಮುದಾಯಕ್ಕೆ ಪ್ರೀತಿ ಪ್ರೇಮದ ವಿಷಯವೇ ಗೊತ್ತಿಲ್ಲ!! ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ

0 comments

ಮುಸ್ಲಿಮರೆಂದರೆ ಅವರು ಕಾಮುಕರು, ಅವರ ಸಮುದಾಯಕ್ಕೆ ಪ್ರೀತಿ ಪ್ರೇಮದ ವಿಚಾರವೇ ತಿಳಿದಿಲ್ಲ. ಕೇವಲ ತೀಟೆ ತೀರಿಸಿಕೊಳ್ಳಲು, ಮತಾಂತರ ಮಾಡಲು ಮಾತ್ರ ಅವರು ಪ್ರೇಮದ ನಾಟಕ ನಡೆಸುತ್ತಾರೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದು, ಪ್ರಸ್ತುತ ಚರ್ಚೆಗೆ ಕಾರಣವಾಗಿದೆ.

ಸಾಗರದ ಗಾಂಧೀ ಮೈದಾನದಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಮಾತು ಹೇಳಿದರು. ಭಾರತದ ಧ್ವಜ ಕೇಸರಿ ಬಣ್ಣದ್ದೇ ಆಗಿರಬೇಕೆಂಬ ಪ್ರಸ್ತಾಪ ನಿನ್ನೆ ಮೊನ್ನೆಯದಲ್ಲ, ಸ್ವಾತಂತ್ರ್ಯ ಬಂದ ಕಾಲದಲ್ಲಿಯೇ ಈ ವಿಚಾರ ಪ್ರಸ್ತಾಪ ಮಾಡಲಾಗಿತ್ತು.

ಆಗಿನ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ತ ಇದ್ದರೆಂಬ ಕಾರಣಕ್ಕೆ ಅವರವರ ಧರ್ಮದ ಬಣ್ಣಗಳನ್ನು ಮಿಶ್ರಣ ಮಾಡಿದ್ದಾರೆ ಎಂದರಲ್ಲದೆ,ಈ ದೇಶವೇ ಕೇಸರಿ ಆಗಿರುವಾಗ ಕೇಸರೀಕರಣ ಮಾಡುವ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ ಎಂದು ಅವರು ಪ್ರಶ್ನಿಸಿದರು.

You may also like

Leave a Comment