Home » ಕಾರ್ಕಳ : ಶಾಲಾ ಪ್ರವಾಸದ ವಾಹನ ಪಲ್ಟಿ- ಓರ್ವ ಬಾಲಕ ಸಾವು

ಕಾರ್ಕಳ : ಶಾಲಾ ಪ್ರವಾಸದ ವಾಹನ ಪಲ್ಟಿ- ಓರ್ವ ಬಾಲಕ ಸಾವು

0 comments

ಕಾರ್ಕಳ : ಕುದುರೆಮುಖ-ಮಾಳ ಹೆದ್ದಾರಿ ನಡುವೆ ಘಾಟಿ ರಸ್ತೆಯ ಎಸ್ ಕೆ ಬಾರ್ಡರ್ ಹಾಗೂ ಚೆಕ್ ಪೋಸ್ಟ್ ಬಳಿ ಟೆಂಪೋ ಟ್ರಾವೆಲರ್ ಉರುಳಿ ಬಿದ್ದು ಶಾಲಾ ಬಾಲಕನೋರ್ವ ಮೃತ ಪಟ್ಟ ಘಟನೆ ಮೇ.8 ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕ ಧಾರಾವಾಡ ಮೂಲದ ಹೇಮಂತ್ (24) ಎಂದು ಗುರುತಿಸಲಾಗಿದೆ.

ಶಾಲಾ ಮಕ್ಕಳು ಪ್ರವಾಸ ನಿಮಿತ್ತ ಉಡುಪಿ ಕಡೆಗೆ ತೆರಳುತ್ತಿರುವ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಮೃತ ದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

You may also like

Leave a Comment