Home » ಕಾರ್ಕಳ : ಹಿಂದೂ ಅಪ್ರಾಪ್ತ ಹುಡುಗಿಯ ಫೋನ್ ನಂಬರ್ ಕದ್ದು ಪ್ರೀತಿಸಲು ಕಿರಿಕಿರಿ, ಮಹಮ್ಮದ್ ಯಾಸೀನ್ ಬಂಧನ, ಫೋಕ್ಸೋ ದಾಖಲು

ಕಾರ್ಕಳ : ಹಿಂದೂ ಅಪ್ರಾಪ್ತ ಹುಡುಗಿಯ ಫೋನ್ ನಂಬರ್ ಕದ್ದು ಪ್ರೀತಿಸಲು ಕಿರಿಕಿರಿ, ಮಹಮ್ಮದ್ ಯಾಸೀನ್ ಬಂಧನ, ಫೋಕ್ಸೋ ದಾಖಲು

0 comments

ಕಾರ್ಕಳ: ಅನ್ಯಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹಿಂದೂ ಬಾಲಕಿಯೋರ್ವಳಿಗೆ ಕಿರುಕುಳ ನೀಡಿದ ಘಟನೆಯೊಂದು ತಾಲ್ಲೂಕಿನಲ್ಲಿ ನಡೆದಿದ್ದು, ದೂರು ದಾಖಲಾಗಿದೆ.

ಕಾರ್ಕಳದ ಹುಡ್ಕೊ ನಿವಾಸಿ, ಅನ್ಯಕೋಮಿನ ಹುಡುಗ ಮಹಮ್ಮದ್ ಯಾಸಿನ್ (21) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾರ್ಕಳದ ಹಿಂದೂ ಅಪ್ರಾಪ್ತ ಬಾಲಕಿ(14)ಗೆ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ. ಈಗ ಈತನ ಮೇಲೆ ದೂರು ದಾಖಲಾಗಿದ್ದು, ಈ ದೂರಿನನ್ವಯ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿ ಮಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಆಕೆಯ ಫೋನ್ ನಂಬರ್ ಬಳಸಿ ಆಕೆಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿ, ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ.ಇಷ್ಟು ಮಾತ್ರವಲ್ಲದೇ, ತನ್ನನ್ನು ಪ್ರೀತಿಸುವಂತೆ ಹಾಗೂ ತನ್ನ ಜೊತೆ ಬರುವಂತೆ ಆಕೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಶುಕ್ರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪದಡಿ ಆರೋಪಿಯನ್ನು ನಗರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment