Kemaru shree : ಸನಾತನ ಹಿಂದೂ ಧರ್ಮವನ್ನು ಮಾರಕ ಖಾಯಿಲೆಗೆ ಹೋಲಿಸಿದ ತಮಿಳುನಾಡು ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿಕೆಯನ್ನು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು (Kemaru shree) ಇಲ್ಲಿನ ಶ್ರೀ ಶ್ರೀ ಈಶ ವಿಠಲದಾಸ ಶ್ರೀಗಳು ತೀವ್ರವಾಗಿ ಖಂಡಿಸಿದ್ದಾರೆ.
ಸನಾತನ ಸಂಸ್ಕೃತಿಯ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು. ಸನಾತನ ಸಂಸ್ಕೃತಿ ಹಾಗೂ ಧರ್ಮದ ರಕ್ಷಣೆಗಾಗಿ ಲಕ್ಷೋಪಲಕ್ಷ ಸಾಧು ಸಂತರು ತಪಸ್ಸಿನ ಮೂಲಕ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಸನಾತನ ಪರಂಪರೆ, ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವ ಕೆಲಸವನ್ನು ಮಾಡಿದ್ದಾರೆ. ಈ ಮಣ್ಣಿನ ಮೂಲ ಧರ್ಮ, ಸಂಸ್ಕೃತಿ, ಜೀವನ ವಿಧಾನವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಾಲ್ಯದಿಂದಲೇ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದನ್ನು ಕಲಿಸಬೇಕು ಎಂದರು.
ಕಳೆದ ಕೆಲ ದಿನಗಳ ಹಿಂದೆ ನಾಲಗೆ ಹರಿಯಬಿಟ್ಟಿದ್ದ ಸ್ಟಾಲಿನ್, ಸನಾತನ ಹಿಂದೂ ಧರ್ಮವು ಮಾರಕ ಖಾಯಿಲೆಗಳಾದ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದಿದ್ದ. ಇದಾದ ಬೆನ್ನಲ್ಲೇ ಹಿಂದೂ ಧರ್ಮದ ಶ್ರೀಗಳು, ನಾಯಕರುಗಳು ಹೇಳಿಕೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: Hospete: TET ಪರೀಕ್ಷೆ ಬರೆಯಲು ಬುರ್ಖಾ ಧರಿಸಿ ಬಂದ ಪರೀಕ್ಷಾರ್ಥಿಗಳು – ನಂತರ ಆದದ್ದೇನು?
