Home » Puttur: ಪುತ್ತೂರು ಜಾತ್ರೆಯಂದು ಭೇಟಿಯಾದ ಯುವತಿಯನ್ನು ಕರೆದು ಅತ್ಯಾಚಾರ : ಕೆಯ್ಯೂರಿನ‌ ಯುವಕನ ಬಂಧನ

Puttur: ಪುತ್ತೂರು ಜಾತ್ರೆಯಂದು ಭೇಟಿಯಾದ ಯುವತಿಯನ್ನು ಕರೆದು ಅತ್ಯಾಚಾರ : ಕೆಯ್ಯೂರಿನ‌ ಯುವಕನ ಬಂಧನ

by Praveen Chennavara
0 comments
Puttur

Puttur: ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪ್ರಾಪ್ತಯನ್ನು ಪುತ್ತೂರು (Puttur) ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿ ಆಕೆಯನ್ನು ಪುಸಲಾಯಿಸಿ ಅಂಗನವಾಡಿ ಶಾಲೆಯ ವರಾಂಡಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಬಗ್ಗೆ ಅಪ್ರಾಪ್ತೆಯೋರ್ವಳು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನವೀನ್ ಫೇಸ್‌ಬುಕ್‌ನಲ್ಲಿ ಪರಿಚಯವಾದ ಕಾಸರಗೋಡು ಮೂಲದ ಅಪ್ರಾಪ್ತೆಯನ್ನು ಎ.16ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿದ್ದ.

ಬಳಿಕ ಆಕೆಯನ್ನು ಪುಸಲಾಯಿಸಿ ರಾತ್ರಿ ಸ್ಕೂಟರ್‌ನಲ್ಲಿ ಕೆಯ್ಯೂರಿನ ಮಾಡಾವು ಅಂಗನವಾಡಿ ಬಳಿ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಆರೋಪಿಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ನವೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Anushka – Virat Kohli: ಬೆಂಗಳೂರಿನಲ್ಲಿ ವಿರುಷ್ಕಾ ಮಸಾಲೆ ದೋಸೆ ಸವಿದ CTR ಹೋಟೆಲ್’ನ ವೈಶಿಷ್ಯ ಕೇಳಿದ್ರೆ ಬೆರಗಾಗ್ತಿರ !

You may also like

Leave a Comment