Home » ಕೊಣಾಜೆ : ಮಸೀದಿ ಬಳಿ ಬೊಬ್ಬೆ ಹಾಕಿದ ಯುವಕರು | ಮೂವರು ಪೊಲೀಸ್ ವಶಕ್ಕೆ

ಕೊಣಾಜೆ : ಮಸೀದಿ ಬಳಿ ಬೊಬ್ಬೆ ಹಾಕಿದ ಯುವಕರು | ಮೂವರು ಪೊಲೀಸ್ ವಶಕ್ಕೆ

by Praveen Chennavara
0 comments

ಮಂಗಳೂರು: ಕುರ್ನಾಡುವಿನ ಸುಬ್ಬಗುಳಿ ತಾಜುಲ್ ಉಲಮಾ ಜುಮಾ ಮಸೀದಿ ಬಳಿ ಮೂವರು ಯುವಕರು ಬೊಬ್ಬೆ ಹಾಕಿ ದುಷ್ಕೃತ್ಯಕ್ಕೆ ಯತ್ನಿಸಿದ್ದಾರೆ ಎಂದು ಮಸೀದಿಯ ಕಮಿಟಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

ರವಿವಾರ ತಡರಾತ್ರಿ ಕುರ್ನಾಡು ಪರಿಸರದ ಮೂವರು ಯುವಕರು ಮಸೀದಿ ಬಳಿ ಘೋಷಣೆಗಳನ್ನು ಕೂಗಿ, ಮಸೀದಿಗೆ ಹಾನಿಗೊಳಿಸಲು ಯತ್ನಿಸಿದ್ದಾರೆ ಎಂದು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಸೀದಿಯ ಕಾರ್ಯದರ್ಶಿ ಲತೀಫ್ ಅವರು ತಿಳಿಸಿದ್ದಾರೆ.

ಪರಿಸರದಲ್ಲಿ ಹಿಂದೂ ಮುಸ್ಲಿಂ ಜನರು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದು ಇದನ್ನು ಸಹಿಸದ ಕೆಲವರು ಇಂತಹ ಹೀನ ಕೃತ್ಯ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಕೊಣಾಜೆಯಲ್ಲಿ ಮಸೀದಿಯೊಂದರ ಬಳಿ ಮೂವರು ವ್ಯಕ್ತಿಗಳು ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಅವರನ್ನು ತಡೆದು ಹಿಡಿಯಲು ಪ್ರಯತ್ನಿಸಿದ್ದಾರೆ. ಮೂವರನ್ನೂ ವಶಕ್ಕೆ ಪಡೆಯಲಾಗಿದೆ. ಅವರ ಹಿನ್ನೆಲೆ ಪರಿಶೀಲಿಸುತ್ತಿದ್ದು ಎಫ್ ಐ ಆರ್ ಇನ್ನಷ್ಟೇ ದಾಖಲಾಗಬೇಕಿದೆ’ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

You may also like

Leave a Comment