Home » ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸಿದ ದೇವದಾಸ್ ಜೈಲಿನಿಂದ ಹೊರಬಂದರೆ ಕೈಕಾಲು ಕಡಿಯುವ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ಸಮಾಜದ ವ್ಯಕ್ತಿ

ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸಿದ ದೇವದಾಸ್ ಜೈಲಿನಿಂದ ಹೊರಬಂದರೆ ಕೈಕಾಲು ಕಡಿಯುವ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ಸಮಾಜದ ವ್ಯಕ್ತಿ

by Praveen Chennavara
0 comments

ಕಾರ್ಣಿಕದ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಯ ವಿರುದ್ಧ ಇದೀಗ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಗುಡುಗಿದ್ದು, ಭಾರಿ ಎಚ್ಚರಿಕೆಯನ್ನೇ ನೀಡಿದ್ದಾರೆ. ಜೈಲಿನಲ್ಲಿರುವ ಆರೋಪಿ ಹೊರಗೆ ಬಂದರೆ ಆತನ ಕೈ-ಕಾಲು ಕಡಿಯುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಕೊರಗಜ್ಜ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದ ಆರೋಪದ ಮೇಲೆ ಉಳ್ಳಾಲದ ಮಿತ್ರನಗರ ನಿವಾಸಿ ದೇವದಾಸ್ ದೇಸಾಯಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಆ ಆರೋಪಿ ವಿರುದ್ಧ ರೋಶನ್ ಡಿಸೋಜ ಎಂಬವರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಂಗಳೂರು ನಗರದ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ್ದ ಆರೋಪಿ ದೇವದಾಸ್, ಕ್ರಿಶ್ಚಿಯನ್ ಧರ್ಮದ ಅನುಯಾಯಿ ಆಗಿದ್ದ. ಇಂಥವನಿಂದ ನಿಜವಾದ ಕ್ರೈಸ್ತರಿಗೆ ಬೇಸರವಾಗಿದೆ. ಇದೆಲ್ಲ ನ್ಯೂಲೈಫ್ ಪಂಥದವರ ಅವಾಂತರ ಎಂದು ಹೇಳಿರುವ ರೋಶನ್, ದೇವದಾಸ್‌ಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಆತ ಜೈಲಿನಿಂದ ಹೊರಗೆ ಬಂದರೆ ಅವನ ಕೈ-ಕಾಲು ಕಡಿಯುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like

Leave a Comment