Home » ಮದುವೆ ಮನೆಯಲ್ಲಿ ಕೊರಗಜ್ಜ ವೇಷ ಧರಿಸಿ ಅವಹೇಳನ | ಪುತ್ತೂರಿನ ಫಾತಿಮ ಡ್ರೆಸ್ ಶಾಪ್ ಮಾಲಕ ಸಹಿತ ಇಬ್ಬರ ಬಂಧನ

ಮದುವೆ ಮನೆಯಲ್ಲಿ ಕೊರಗಜ್ಜ ವೇಷ ಧರಿಸಿ ಅವಹೇಳನ | ಪುತ್ತೂರಿನ ಫಾತಿಮ ಡ್ರೆಸ್ ಶಾಪ್ ಮಾಲಕ ಸಹಿತ ಇಬ್ಬರ ಬಂಧನ

by Praveen Chennavara
0 comments

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಮುಸ್ಲಿಂ ಸಮುದಾಯದ ಮನೆಯೊಂದರ ಮದುವೆ ಸಮಾರಂಭದ ಔತಣ ಕೂಟದಲ್ಲಿ ಮದುಮಗ ಕೊರಗಜ್ಜನ ಮಾದರಿಯ ವೇಷ ದರಿಸಿ ಕುಣಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣದಲ್ಲಿ ಬಾಗಿಯಾಗಿರುವ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿಮಾ ಮ್ಯಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್ ಮುಸ್ತಾಬ್(28ವ.) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯ್ದಿನ್ ಮನೀಶ್(19.ವ) ಬಂಧಿತ ಆರೋಪಿಗಳಾಗಿದ್ದಾರೆ.

You may also like

Leave a Comment