Indira Canteen: ಕರಾವಳಿಯ ಜನತೆಗೆ ಇಂದಿರಾ ಕ್ಯಾಂಟೀನ್ ನಿಂದ ಸಿಹಿ ಸುದ್ದಿ ಒಂದಿದೆ. ಇನ್ನುಮುಂದೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಇಂದಿರಾ ಕ್ಯಾಂಟೀನ್ (Indira Canteen) ಗಳಲ್ಲಿ ಶೇ 50 ರಷ್ಟು ಬೆಳ್ತಿಗೆ ಅನ್ನದ ಜೊತೆ ಶೇ 50 ರಷ್ಟು ಕುಚ್ಚಲನ್ನ ಕೊಡಲು ನಿರ್ಧರಿಸಲಾಗಿದ್ದು, ಡಿಸೆಂಬರ್ ವೇಳೆಗೆ ಜಾರಿಗೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಾರುಕಟ್ಟೆಯಿಂದ ಕುಚ್ಚಲಕ್ಕಿ ಖರೀದಿಸಿ ನೀಡುವ ನಿಟ್ಟಿನಲ್ಲಿ ಟೆಂಡರ್ ಕರೆಯಲಾಗಿದ್ದು ಇನ್ನೊಂದು ತಿಂಗಳೊಳಗೆ ಪ್ರಕ್ರಿಯೆ ಅಂತಿಮವಾಗಲಿದೆ. ಉಡುಪಿ, ಮಣಿಪಾಲ, ಕಾರ್ಕಳ ಹಾಗೂ ಕುಂದಾಪುರದಲ್ಲಿರುವ ಇಂದಿರಾ ಕ್ಯಾಂಟೀನ್ ಬೈಂದೂರು, ಕಾಪುವಿನಲ್ಲೂ ಆರಂಭಕ್ಕೆ 60*40 ಜಾಗ ಪರಿಶೀಲಿಸಿ ಗುರುತಿಸಿದ್ದು ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.
ಉಡುಪಿಯಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸರಾಸರಿ 350ರಿಂದ 450, ಕಾರ್ಕಳದಲ್ಲಿ 290ರಿಂದ 300 ಹಾಗೂ ಕುಂದಾಪುರದಲ್ಲಿ 300 ರಿಂದ 350ಮಂದಿಗೆ ನೀಡಲಾಗುತ್ತಿದೆ.
ಇಡ್ಲಿ ಚಟ್ನಿ, ಚಪಾತಿ ಸಾಗು, ಕೀರು ಇನ್ನು ಮುಂದೆ ಇಂದಿರಾ ಕ್ಯಾಂಟೀನಲ್ಲಿ ಸಿಗಲಿದ್ದು ಪುರಸಭೆ ವ್ಯಾಪ್ತಿಯಲ್ಲಿ ಮೂರು ಹೊತ್ತಿಗೆ ಗರಿಷ್ಠ 300, ಪಟ್ಟಣ ಪಂಚಾಯಿತಿ: 200, ನಗರಸಭೆ ವ್ಯಾಪ್ತಿಯಲ್ಲಿ 500 ಪ್ಲೇಟ್ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲು ಅವಕಾಶವಿದೆ. ಒಬ್ಬ ವ್ಯಕ್ತಿಗೆ ತಿಂಡಿ, ಎರಡು ಹೊತ್ತಿನ ಊಟದ ಸರಾಸರಿ ವೆಚ್ಚವನ್ನು 57ರಿಂದ 62ರೂ. ಗಳಿಗೆ ಏರಿಸಿದ್ದರೂ ಗ್ರಾಹಕರಿಂದ ತಿಂಡಿಗೆ 5 ಹಾಗೂ ಊಟಕ್ಕೆ 10ರೂ. ಮಾತ್ರ ತೆಗೆದುಕೊಳ್ಳಲಾಗುತ್ತಿದೆ.
ಈ ಕುರಿತಾಗಿ, ಇಂದಿರಾ ಕ್ಯಾಂಟೀನುಗಳ ಸ್ವಚ್ಛತೆ, ನಿರ್ವಹಣೆ ನಿಟ್ಟಿನಲ್ಲಿ 30ಲಕ್ಷ ರೂ. ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಲ್ಕು ಇಂದಿರಾ ಕ್ಯಾಂಟೀನುಗಳಲ್ಲಿ ಮಧ್ಯಾಹ್ನ, ರಾತ್ರಿಯೂಟ 3,200 ಪ್ಲೇಟ್ ನೀಡಲುತ್ತಿದ್ದು 1,600ಪ್ಲೇಟ್ ಕುಚ್ಚಲನ್ನ ತಯಾರಿಸಿ ಪ್ರಾಯೋಗಿಕವಾಗಿ ನೀಡಲಾಗುವುದು ಎಂದು ಶ್ರೀಧರ ಜಿ., ಯೋಜನಾ ನಿರ್ದೇಶಕರು, ನಗರ ಕೋಶ, ರಜತಾದ್ರಿ, ಮಣಿಪಾಲ ಇವರು ತಿಳಿಸಿದ್ದಾರೆ.
ಇದನ್ನು ಓದಿ: 7th Pay Commission: ಸರ್ಕಾರಿ ನೌಕರರ ಗಮನಕ್ಕೆ- ಮನೆ ಬಾಡಿಗೆ ಮತ್ತು ಇತರ ಭತ್ಯೆ ಏರಿಕೆ ಬಗ್ಗೆ ಇಲ್ಲಿದೆ ನೋಡಿ ಬಿಗ್ ಅಪ್ಡೇಟ್
