Home » ಕುಂದಾಪುರ: ಸೀಮೆಎಣ್ಣೆ ಸುರಿದು ಪೊಲೀಸರ ಮೇಲೆ ಎಸೆದ ಮಹಿಳೆ! ಈಕೆಯ ರೋಷಾವೇಷಕ್ಕೆ ಕಾರಣವೇನು ಗೊತ್ತೇ?

ಕುಂದಾಪುರ: ಸೀಮೆಎಣ್ಣೆ ಸುರಿದು ಪೊಲೀಸರ ಮೇಲೆ ಎಸೆದ ಮಹಿಳೆ! ಈಕೆಯ ರೋಷಾವೇಷಕ್ಕೆ ಕಾರಣವೇನು ಗೊತ್ತೇ?

2 comments
Kundapur

Kundapur: ಕುಂದಾಪುರ(Kundapur) ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ ನಲ್ಲಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ರಸ್ತೆ ಬದಿ ಸಾಮಗ್ರಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪೊಲೀಸರು(Police )ವಿಚಾರಣೆಗೆ ಬಂದಿದ್ದು, ಈ ವೇಳೆ ಮಹಿಳೆ ಪೋಲೀಸರ ಮೇಲೆ ಸೀಮೆಎಣ್ಣೆ ಸುರಿಯಲು ಬಂದ ಘಟನೆ ಭಾನುವಾರ ನಡೆದಿದೆ ಎಂದು ತಿಳಿದುಬಂದಿದೆ.

ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಸರೋಜಾ ದಾಸ್ ಎಂಬ ಮಹಿಳೆ ಫ್ಯಾನ್ಸಿ ಅಂಗಡಿಯನ್ನು (Fancy Shop) ಬಾಡಿಗೆಗೆ ಪಡೆದು ವ್ಯಾಪಾರ ನಡೆಸುತ್ತಿದ್ದರೆನ್ನಲಾಗಿದೆ. ಈ ಮಹಿಳೆ ಅಂಗಡಿಯ ಬಾಗಿಲು ಮತ್ತು ವ್ಯಾಪಾರದ ಇನ್ನಿತರ ಪರಿಕರಗಳನ್ನು ರಸ್ತೆಯವರೆಗೆ ಇಡುತ್ತಿದ್ದ ಹಿನ್ನೆಲೆ ವಾಹನ ಸಂಚಾರ ಮಾಡಲು ತೊಂದರೆ ಆಗುತ್ತಿದ್ದುದರಿಂದ ಸ್ಥಳೀಯರು ಈ ಕುರಿತು ದೂರು ನೀಡಿದ್ದರು.

ಸ್ಥಳೀಯರ ದೂರಿನ ಮೇರೆಗೆ ವಿಚಾರಣೆಗೆ ಆಗಮಿಸಿದ ಪೊಲೀಸರನ್ನು ಗದರಿದ ಮಹಿಳೆ ಬಾಟಲಿಯಿಂದ ಸೀಮೆಎಣ್ಣೆಯನ್ನು ಪೋಲಿಸರ ಮೇಲೆ ಸುರಿಯಲು ಮುಂದಾಗಿದ್ದು, ಈ ವೇಳೆ ಪೊಲೀಸರು ತಪ್ಪಿಸಿಕೊಂಡಿದ್ದಾರೆ . ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಸೀಮೆಎಣ್ಣೆ ನೆಲದ ಮೇಲೆ ಬಿದ್ದಿದ್ದನ್ನು ಗಮನಿಸಿ ಮಹಿಳೆ ಬೆಂಕಿಯನ್ನು ಹಚ್ಚಿದ್ದಾರೆ ಎನ್ನಲಾಗಿದೆ. ಹೀಗಾಗಿ, ಪೊಲೀಸ್ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟಿದ್ದು, ಪೊಲೀಸ್ ಸಿಬ್ಬಂದಿಯನ್ನು ಎಳೆದು ದೂಡಿದ ಮಹಿಳೆ ಜೀವ ಬೆದರಿಕೆ ಹಾಕಿದ್ದು, ಹೀಗಾಗಿ , ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kodagu:ಹುಡುಗಿಯರ ಹಾಸ್ಟೆಲ್ ಎದುರಲ್ಲೇ ಯುವಕನೋರ್ವನ ಹಸ್ತಮೈಥುನ! ವೀಡಿಯೋ ವೈರಲ್!

You may also like

Leave a Comment