Home » Puttur: ಬೆಳ್ಳಾರೆ: ವಿದ್ಯಾರ್ಥಿ ದಿಢೀರ್‌ ಅಸ್ವಸ್ಥಗೊಂಡು ನಿಧನ!

Puttur: ಬೆಳ್ಳಾರೆ: ವಿದ್ಯಾರ್ಥಿ ದಿಢೀರ್‌ ಅಸ್ವಸ್ಥಗೊಂಡು ನಿಧನ!

0 comments
Puttur

Puttur : ಎಂಬಿಎ ವಿದ್ಯಾರ್ಥಿಯೋರ್ವ ದಿಢೀರ್‌ ಅಸ್ವಸ್ಥಗೊಂಡು ನಿಧನ ಹೊಂದಿದ ಘಟನೆಯೊಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ (puttur) ನಡೆದಿದೆ. ಮೃತ ಯುವಕನನ್ನು ಶರತ್‌ ಜೋಶಿ (21) ಎಂದು ಹೇಳಲಾಗಿದೆ.. ಇವರು ಬೆಳ್ಳಾರೆಯ ಉದ್ಯಮಿ, ಪ್ರಸಾದ್‌ ಹಾರ್ಡ್‌ವೇರ್ಸ್‌ನ ಮಾಲಕ ಸುಬ್ರಹ್ಮಣ್ಯ ಜೋಶಿಯವರ ಪುತ್ರ.

ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ..ಬಿ.ಎ ವ್ಯಾಸಂಗ ಮಾಡುತ್ತಿದ್ದ ಶರತ್‌ ಜೋಷಿ ಅವರು ಪರೀಕ್ಷೆ ಬರೆದು ನಿನ್ನೆ ಮನೆಗೆ ಬಂದಿದ್ದರು. ಆದರೆ ಏನಾಯ್ತೋ ಏನೋ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತರಲಾಯಿತಾದರೂ ಅವರು ಮೃತ ಹೊಂದಿದ್ದಾರೆ ಎಂದು ವರದಿಯಾಗಿದೆ.

ದಿಢೀರ್‌ ಹೃದಯಾಘಾತಕ್ಕೆ ಒಳಗಾಗಿ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕರಷೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿಯಬೇಕಿದೆ. ಮೃತರು ತಂದೆ, ತಾಯಿ ಸಹೋದರಿ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಇದನ್ನೂ ಓದಿ: Zeeshan Khan: ಕಿಸ್ ಮಾಡಿ ಪ್ಯಾಂಟ್ ಬಿಚ್ಚು ಎಂದ್ರು- ಖ್ಯಾತ ನಟನೋರ್ವನ ಮಾತು! ಯಾರು ಆ ರೀತಿ ಹೇಳಿದ್ದು?

You may also like

Leave a Comment