Karkala: ಕಾರಿನಲ್ಲಿ ತೆರಳುತ್ತಿದ್ದ ಕಾಲೇಜೊಂದರ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ತಡೆದು ಪ್ರಶ್ನಿಸಿ ಹಲ್ಲೆ ನಡೆಸಿದ್ದ ಘಟನೆಯೊಂದು ಕಾರ್ಕಳದಲ್ಲಿ (Karkala) ಜುಲೈ 29 ರಂದು ನಡೆದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೈತಿಕ ಪೊಲೀಸ್ ಗಿರಿ ಆರೋಪದಲ್ಲಿ ಐವರು ಹಿಂದೂ ಸಂಘಟನೆಯೊಂದರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಂತೋಷ್, ಕಾರ್ತಿಕ್ ಪೂಜಾರಿ, ಸುನಿಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಎಂದು ಗುರುತಿಸಲಾಗಿದೆ. ಈ ಐವರು ಮಂಗಳೂರಿನಿಂದ ಕಾರ್ಕಳದತ್ತ ಇಬ್ಬರು ಮಹಿಳಾ ಪ್ರೊಫೆಸರ್ ಗಳೊಂದಿಗೆ ಪ್ರಯಾಣಿಸುತ್ತಿದ್ದ ವೈದ್ಯರುಗಳನ್ನು ಕುಂಟಲ್ಪಾಡಿ ಎಂಬಲ್ಲಿ ತಡೆದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ನೈತಿಕ ಪೊಲೀಸ್ ಗಿರಿ ತಡೆಯುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದು, ನಿನ್ನೆ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ನೈತಿಕ ಪೊಲೀಸ್ ಗಿರಿ ನಡೆಸುವವರ ಮೇಲೆ ಕೂಡಲೇ ಕೇಸು ದಾಖಲಿಸಲು ಸೂಚಿಸಿದ್ದರು.
ಇದನ್ನೂ ಓದಿ: Nitin Desai Death: ‘ಬಿಗ್ ಬಾಸ್’ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಗ್ ಮನೆಯ ಒಡೆಯ !
