Putturu:ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವಕ್ಕೆ ಭದ್ರಕೋಟೆ ಎನಿಸಿದರು ಕೂಡ ಇಲ್ಲಿ ಆಗಾಗ ಲವ್ ಜಿಹಾದ್ ಪ್ರಕರಣಗಳು ಬಯಲಾಗುತ್ತಿರುತ್ತದೆ. ಅಂತೀಯ ಇದೀಗ ಪುತ್ತೂರಿನಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ತಮಗಾದ ಅನ್ಯಾಯದ ವಿರುದ್ಧ ಹುಡುಗಿಯ ಪೋಷಕರು ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಹೌದು, ಪುತ್ತೂರಿನ(Putturu) ಶ್ರೀ ಮಹಾಲಿಂಗೇಶ್ವರ ದೇವರ(Mahalingeshwara ) ಹುಂಡಿಯಲ್ಲಿರುವ ಹಣವನ್ನು ಲೆಕ್ಕ ಮಾಡಲು ಬೀಗ ತೆರೆದಂತಹ ಸಂದರ್ಭದಲ್ಲಿ ಹುಂಡಿ ಒಳಗೆ ಈ ರೀತಿಯ ಪತ್ರವೊಂದು ಕಂಡುಬಂದಿದೆ. ಇದರಲ್ಲಿ ಹುಡುಗಿಯ ಪೋಷಕರು ಸಮೀರ್ ಎಂಬ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದೇವರಲ್ಲಿ ಆತನ ವಿರುದ್ಧ ತಮ್ಮ ದೂರನ್ನು ತೋಡಿಕೊಂಡಿದ್ದಾರೆ. ಇದರಿಂದಾಗಿ ಪುತ್ತೂರಿನಲ್ಲಿ ತೆರೆ ಮರೆಯಲ್ಲಿ ಒಂದು ಲವ್ ಜಿಹಾದ್ ಪ್ರಕರಣ ನಡೆಯುತ್ತಿದೆ ಎಂಬುದು ಭಯಲಾಗಿದೆ.

ಚೀಟಿಯಲ್ಲಿ ಏನಿದೆ?
ಹುಂಡಿಗೆ ದೂರಿನ ಚೀಟಿ ಬರೆದು ಹಾಕಿರುವ ಯುವತಿಯ ಪೋಷಕರು ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ‘ಸಮೀರ್ ನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ’ ‘ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ’ ‘ನಮ್ಮ ಜೀವನ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳಾಗಬೇಕು. ‘ಸಮೀರ್ ನಿಗೆ ಮದುವೆ ಆಗಲು ಹುಡುಗಿ ಸಿಗಬಾರದು’ ‘ಓ ದೇವರೇ ಇದು ನನ್ನ ಪ್ರಾರ್ಥನೆ’ ಎಂದು ಯುವತಿಯ ಅಸಹಾಯಕ ಪೋಷಕರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಗೆ ಚೀಟಿ ಬರೆದು ಹಾಕಿ ಪ್ರಾರ್ಥನೆ ಮಾಡಿದ್ದಾರೆ.
