Home » ಹುಡುಗಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನಿಂದಲೇ ಸೆಕ್ಸ್ ಸಂದೇಶ | ಎಡಬಿಡಂಗಿ ಯುವಕನ ಬಂಧನ !

ಹುಡುಗಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನಿಂದಲೇ ಸೆಕ್ಸ್ ಸಂದೇಶ | ಎಡಬಿಡಂಗಿ ಯುವಕನ ಬಂಧನ !

0 comments

ಮಂಗಳೂರು: ಯುವತಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನೆ ಅಶ್ಲೀಲ ಸಂದೇಶ ಕಳಿಸಿ ಬಂಧನಕ್ಕೆ ಒಳಗಾದ ವಿಚಿತ್ರ ಪ್ರಕರನ ಮಂಗಳೂರಿನಿಂದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ.

ಶ್ರೀನಿವಾಸ ಭಟ್ ಗೆ ನಗರದ ಯುವತಿಯೊಬ್ಬಳ ಜೊತೆ ಮದುವೆಗೆ ಮಾತುಕತೆ ನಡೆದಿತ್ತು. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಇನ್ನೇನು ನಿಶ್ಚಿತಾರ್ಥ ನಡೆಯಲಿತ್ತು. ಈ ಮಧ್ಯೆ ಸಹಜವಾಗಿ ಶ್ರೀನಿವಾಸ್ ಮದುವೆಯಾಗಲಿದ್ದ ಯುವತಿಯ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಆರಂಭಿಸಿದ್ದಾನೆ. ಆದರೆ ಅಸಹಜವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ.

ಆಕೆ ತಾನು ಮದುವೆಯಾಗಲಿರುವ ಹುಡುಗಿ, ಮುಂದೆ ಯಾವತ್ತೂ ನನ್ನವಳೇ, ಎಂದು ಕೂಡ ತಾಳ್ಮೆ ಇಲ್ಲದೆ ಯುವತಿ ಜೊತೆ ಸಲುಗೆಯಿಂದ ಮಾತನಾಡಿ ಶ್ರೀನಿವಾಸ್ ಭಟ್ ಎಡಬಿಡಂಗಿಯಂತೆ ವರ್ತಿಸಿ ಸೆಕ್ಸ್ಟಿಂಗ್ ಶುರು ಮಾಡಿದ್ದ.
ವಿಚಿತ್ರ ಸಂದೇಶ ಹಾಕುತ್ತಿದ್ದ. ಇದು ಯುವತಿಗೆ ತೀರಾ ಇರಿಸು ಮುರಿಸು ಉಂಟು ಮಾಡುತ್ತಿತ್ತು. ಮೊದಲು ಆತನ ಬಳಿಯೇ ಅದನ್ನು ಹೇಳಿದ್ದಾಳೆ. ಆತ ಮಾತ್ರ ಮತ್ತೆ ಮುಂದುವರೆಸಿದ್ದಾನೆ.
ಆಗ ಈ ವಿಚಾರವನ್ನು ಯುವತಿ ಮನೆಯವರ ಗಮನಕ್ಕೆ ತಂದಿದ್ದು, ಕೂಡಲೇ ಕುಟುಂಬಸ್ಥರು ನಿಶ್ಚಿತಾರ್ಥ ಮುಂದೂಡಿದ್ದರು ಎನ್ನಲಾಗಿದೆ.

ತದನಂತರ ಶ್ರೀನಿವಾಸ್ ಭಟ್ ಸಲಿಂಗ ಕಾಮಕ್ಕೆ ಸಂಬಂಧಿಸಿದ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದು, ಈ ವರ್ತನೆಯಿಂದ ಮತ್ತಷ್ಟು ಅಸಹ್ಯ ಪಟ್ಟುಕೊಂಡ ಯುವತಿ ನಗರದ ಸೈಬರ್ ಠಾಣೆಗೆ ಯುವಕನ ವಿರುದ್ಧ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದ್ದಳು ಎನ್ನಲಾಗಿದೆ. ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

You may also like

Leave a Comment