Home » ಸುಳ್ಯ: ಚಲಿಸುತ್ತಿರುವ ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ!! ಭಯಾನಕ ಘಟನೆಯ ವೀಡಿಯೋ ಸಿ.ಸಿ ಟಿವಿಯಲ್ಲಿ ಸೆರೆ!!

ಸುಳ್ಯ: ಚಲಿಸುತ್ತಿರುವ ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ!! ಭಯಾನಕ ಘಟನೆಯ ವೀಡಿಯೋ ಸಿ.ಸಿ ಟಿವಿಯಲ್ಲಿ ಸೆರೆ!!

0 comments

ಚಲಿಸುತ್ತಿರುವ ಲಾರಿಯಡಿಗೆ ಹಾರಿ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ಸುಳ್ಯ ನಗರದ ಗಾಂಧಿನಗರ ಬಳಿ ಸಂಭವಿಸಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುವನ್ನು ಸುಳ್ಯದ ಗಾಂಧಿನಗರದಲ್ಲಿ ವಾಸವಿರುವ ಉತ್ತರ ಕರ್ನಾಟಕ ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದೆ.

ತೆಂಗಿನಕಾಯಿ ತುಂಬಿಕೊಂಡು ಬರುತ್ತಿದ್ದ ಲಾರಿ ಹತ್ತಿರಕ್ಕೆ ಆಗಮಿಸುತ್ತಿದ್ದಂತೆ ಆ ವ್ಯಕ್ತಿ ಲಾರಿಯ ಹಿಂದಿನ ಚಕ್ರಕ್ಕೆ ಹಾರಿದ್ದಾನೆ. ಆಗ ಲಾರಿ ಆತನನ್ನು ತಳ್ಳಿಕೊಂಡು ಸಾಗಿದ್ದು, ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದೀಗ ಆತನಿಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ತಿಳಿದು ಬರಬೇಕಿದೆ.

You may also like

Leave a Comment