Mangalore Crime: ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಹೊರವಲಯದಲ್ಲಿ ಭೀಕರ ಅಪಘಾತವೊಂದು (Mangalore Crime) ನಡೆದಿದೆ. 17ಎಮ್ಮೆಗಳು ಗೂಡ್ಸ್ ರೈಲಿನಡಿ ಸಿಲುಕಿ ಸಾವಿಗೀಡಾಗಿರುವ ಘಟನೆಯೊಂದು ನಡೆದಿದೆ.
ಗೂಡ್ಸ್ ರೈಲು ಹೋಗುವ ಸಂದರ್ಭದಲ್ಲಿ ಹಾರ್ನ್ ಶಬ್ದ ಹಾಕಿದರೂ ಎಮ್ಮೆಗಳಿಗೆ ಕೇಳಿಸದ ಕಾರಣ ರೈಲು ಅದರ ಮೇಲೆ ಹಾಯ್ದು ಹೋಗಿರುವ ಸಂಭವವಿದೆ. ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆಗೆ ರಾತ್ರಿ ಹೋಗುತ್ತಿದ್ದ ಗೂಡ್ಸ್ ರೈಲಿನಡಿ ಎಮ್ಮೆಗಳು ಸಿಲುಕಿ ಸಾವಿಗೀಡಾಗಿದೆ. ನಾಲ್ಕು ಎಮ್ಮೆಗಳನ್ನು ರಕ್ಷಿಸಲಾಗಿದೆ.
ಮಳೆಗಾಲ ಪ್ರಾರಂಭವಾಗಿದ್ದರಿಂದ ರೈಲ್ವೆ ಟ್ರ್ಯಾಕ್ ಬಳಿ ನೀರು ಇರುತ್ತದೆ. ಹಾಗಾಗಿ ಅಲ್ಲಲ್ಲಿ ರೈಲ್ವೆ ಟ್ರ್ಯಾಕ್ ಮಧ್ಯೆ ನೀರು ನಿಲ್ಲುವುದರಿಂದ ಎಮ್ಮೆಗಳು ಗುಂಪು ಗುಂಪಾಗಿ ಬಂದು ರೈಲ್ವೆ ಮಾರ್ಗದ ಬಳಿ ನಿಲ್ಲುತ್ತದೆ. ಹಾಗಾಗಿ ರೈಲು ಸಾಗುವ ಸಂದರ್ಭದಲ್ಲಿ ಹಾರ್ನ್ ಹಾಕಿದರೂ ಎಮ್ಮೆಗಳಿಗೆ ಒಮ್ಮೆಲೇ ಓಡಲಾಗುವುದಿಲ್ಲ. ಹಾಗಾಗಿ ಈ ದುರಂತ ಸಂಭವಿಸಿದೆ ಎಂದೇ ಹೇಳಬಹುದು.
ಕಳೆದ ವರ್ಷ ಕೂಡಾ ಈ ರೀತಿಯ ದುರ್ಘಟನೆಯೊಂದು ಸುರತ್ಕಲ್‌ನ ತೋಕೂರು ಬಳಿ 2021ರಲ್ಲಿ ನಡೆದಿತ್ತು. ಬೀಡಾಡಿ ಎಮ್ಮೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಸಂದರ್ಭದಲ್ಲಿ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 13ಎಮ್ಮೆಗಳು ಸಾವಿಗೀಡಾಗಿದ್ದವು.
ಈಗ ನಡೆದ ಘಟನೆಯ ಮಾಹಿತಿ ತಿಳಿದ ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ತಡರಾತ್ರಿಯೇ ತಮ್ಮ ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಸತ್ತು ಹೋದ ಎಮ್ಮೆಗಳನ್ನು ರೈಲ್ವೆ ಹಳಿಗಳ ಮೇಲಿನಿಂದ ತೆರವು ಗೊಳಿಸಲಾಗಿದೆ.
ಇದನ್ನೂ ಓದಿ:ಟ್ರಕ್ ಹಾಗೂ ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ! 6 ಮಂದಿ ಸಾವು, 25 ಜನರಿಗೆ ಗಾಯ
