Home » Preksha Sucide case: ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ: ಪ್ರಚೋದನೆ ಆರೋಪಿ ನೇಣು ಬಿಗಿದು ಆತ್ಮಹತ್ಯೆ

Preksha Sucide case: ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ: ಪ್ರಚೋದನೆ ಆರೋಪಿ ನೇಣು ಬಿಗಿದು ಆತ್ಮಹತ್ಯೆ

by Praveen Chennavara
0 comments
Preksha Sucide case

Model Preksha Sucide case : ಮಂಗಳೂರು ಕುಂಪಲದ ರೂಪದರ್ಶಿಯೊಬ್ಬಳ ಆತ್ಮಹತ್ಯೆ ಪ್ರಕರಣದಲ್ಲಿ (Model Preksha Sucide case) ಪ್ರಚೋದನೆ ನೀಡಿದ್ದ ಆರೋಪದಡಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ಯುವಕನೊಬ್ಬ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಎಂಬಲ್ಲಿನ ಮುಂಡೋಳಿ ಎಂಬಲ್ಲಿ ನಡೆದಿದೆ‌.

ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ (20) ಆತ್ಮಹತ್ಯೆಗೈದ ಯುವಕ. ಚಿಕ್ಕಮ್ಮನ ಮನೆಯ ಮುಂಭಾಗದ ಕಬ್ಬಿಣದ ಹುಕ್ಸ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

2021ರ ಮಾರ್ಚ್ 10ರಂದು‌ ರೂಪದರ್ಶಿ ಪ್ರೇಕ್ಷಾ ಕುಂಪಲ ಆತ್ಮಹತ್ಯೆ ಮಾಡಿದ್ದಳು. ಆತ್ಮಹತ್ಯೆಗೆ ಪ್ರೇಕ್ಷಾ ಸ್ನೇಹಿತ ಯತಿರಾಜ್ ಕಾರಣ ಎಂದು ಪ್ರೇಕ್ಷ ಪೋಷಕರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಯತಿರಾಜ್ ಬಂಧಿಸಿದ್ದರು‌.

ಬಳಿಕ ಜಾಮೀನಿನ ಮೇಲೆ ಹೊರಗಿದ್ದ ಯತಿರಾಜ್ ಗುರುವಾರ ನೇಣಿಗೆ ಶರಣಾಗಿದ್ದು,ಪ್ರೇಕ್ಷಾ ಸಾವಿನ ಬಳಿಕ ಹಾಗೂ ಉದ್ಯೋಗವಿಲ್ಲದೇ ಯತಿರಾಜದ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.‌

2021ರ ಮಾರ್ಚ್ 10ರಂದು‌ ಕುಂಪಲದ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರೇಕ್ಷಾ ಸಾವಿಗೆ ಪ್ರಚೋದನೆ ಕೇಸ್ ನಲ್ಲಿ ಉಳ್ಳಾಲ ಪೊಲೀಸರು ಮುಂಡೋಳಿ ನಿವಾಸಿ ಯತೀನ್ ರಾಜ್ ನನ್ನ ವಶಕ್ಕೆ ಪಡೆದಿದ್ದರು. ಯತೀನ್ ರಾಜ್ ಪ್ರೇಕ್ಷಾಳ ಗೆಳೆಯನಾಗಿದ್ದವನು. ಅಸೌಖ್ಯದ ಸಂದರ್ಭ ಔಷಧಿಗೂ ಯತೀನ್ ರಾಜ್ ಕರೆದೊಯ್ಯುತ್ತಿದ್ದನು

ಯುವತಿ ಮೃತದೇಹ ಪತ್ತೆಯಾಗುವ ಕೆಲ ನಿಮಿಷಗಳ ಮುನ್ನ ಈತ ಆಕೆಯ ಮನೆ ಎದುರುಗಡೆ ಸುತ್ತಾಡುವುದನ್ನು ಸ್ಥಳೀಯ ವ್ಯಕ್ತಿ ಕಂಡಿದ್ದರು. ಅವರಿಂದ ದೊರೆತ ಮಾಹಿತಿಯನ್ವಯ ಪೊಲೀಸರು ಅತನನ್ನ ವಶಕ್ಕೆ ಪಡೆದುಕೊಂಡಿದ್ದರು. ಇದೇ ಹೊತ್ತಲ್ಲಿ ಯತಿರಾಜ್ ಪ್ರೇಕ್ಷಾಗೆ ಚಿನ್ನದ ಉಂಗುರವನ್ನ ಗಿಫ್ಟ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಇದೀಗ ಆರೋಪ ಹೊತ್ತ ಯತಿರಾಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಮೂಡುಬಿದಿರೆ : ಚೂರಿಯಿಂದ ತಿವಿದು ಯುವಕನ ಕೊಲೆ

You may also like

Leave a Comment