Home » ಮಂಗಳೂರು:: ಪ್ರೀತಿ ನಿರಾಕರಣೆ ಮಾಡಿದಳೆಂದು ಯುವತಿಯನ್ನು ಅತ್ಯಾಚಾರಗೈದ ಮುಸ್ಲಿಂ ಯುವಕ. ಕಾಮುಕ ಯುವಕನ ಬಂಧನ.

ಮಂಗಳೂರು:: ಪ್ರೀತಿ ನಿರಾಕರಣೆ ಮಾಡಿದಳೆಂದು ಯುವತಿಯನ್ನು ಅತ್ಯಾಚಾರಗೈದ ಮುಸ್ಲಿಂ ಯುವಕ. ಕಾಮುಕ ಯುವಕನ ಬಂಧನ.

0 comments

ಮಂಗಳೂರು:: ಪ್ರೀತಿ ನಿರಾಕರಣೆ ಮಾಡಿದಳೆಂದು ಯುವತಿಯನ್ನು ಅತ್ಯಾಚಾರಗೈದ ಮುಸ್ಲಿಂ ಯುವಕ. ಕಾಮುಕ ಯುವಕನ ಬಂಧನ

ಯುವತಿ ತನ್ನನ್ನು ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕೋಪದಲ್ಲಿ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಯುವತಿಯನ್ನು ಬಲವಂತದಿಂದ ಅತ್ಯಾಚಾರ ಮಾಡಿದ ಯುವಕನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಅಬೂಬಕ್ಕರ್ ಸಿದ್ದಿಕ್ (21) ಬಂಧಿತ ಆರೋಪಿಯಾಗಿದ್ದಾನೆ.

ಯುವತಿ ಮತ್ತು ಅಬೂಬಕ್ಕರ್ ಈ ಹಿಂದೆ ಒಂದೇ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. 2019ರಲ್ಲಿ ಕಾಲೇಜಿನ ಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ಬರು ಜೊತೆಯಾಗಿ ಫೋಟೋ ತೆಗೆದುಕೊಂಡಿದ್ದರು. ವಿದ್ಯಾಭ್ಯಾಸ ಮುಗಿಸಿದ ನಂತರ ಯುವತಿ ಕೆಲಸಕ್ಕೆ ಸೇರಿಕೊಂಡಿದ್ದಳು. ಯುವಕ ಆ ಫೋಟೋವನ್ನು ತೋರಿಸಿ ಹುಡುಗಿಯನ್ನು ಪ್ರೀತಿಸುವಂತೆ ಪೀಡಿಸಲು ಪ್ರಾರಂಭಿಸಿದ್ದಾನೆ. ಯುವತಿ ಆತನನ್ನು ಪ್ರೀತಿಸಲು ನಿರಾಕರಣೆ ಮಾಡಿದಾಗ ಅವರಿಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

ಆದರೆ ಅವಳು ಅವನ ಬೆದರಿಕೆಗೆ ಬಗ್ಗಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಎಂಟರಂದು ಯುವತಿ ಕೆಲಸ ಮುಗಿಸಿ ಬರುತ್ತಿದ್ದ ಸಂದರ್ಭದಲ್ಲಿ ಅವಳನ್ನು ಹಿಂಬಾಲಿಸಿಕೊಂಡು ಬಂದ ಅಬೂಬಕ್ಕರ್ ಆಕೆಯ ಮನೆಗೆ ನುಗ್ಗಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ.ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂದಿಸಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment