Home » ಮಂಗಳೂರು : ಅಡ್ಯಾರ್ ಬಸ್ ನಿಲ್ದಾಣದಲ್ಲಿ ಶಾಲಾ ಬಾಲಕನಿಗೆ ತಂಡದಿಂದ ಹಲ್ಲೆ | ಅವಾಚ್ಯ ಶಬ್ದಗಳಿಂದ ಬಾಲಕನಿಗೆ ನಿಂದನೆ | ವೀಡಿಯೋ ವೈರಲ್!!

ಮಂಗಳೂರು : ಅಡ್ಯಾರ್ ಬಸ್ ನಿಲ್ದಾಣದಲ್ಲಿ ಶಾಲಾ ಬಾಲಕನಿಗೆ ತಂಡದಿಂದ ಹಲ್ಲೆ | ಅವಾಚ್ಯ ಶಬ್ದಗಳಿಂದ ಬಾಲಕನಿಗೆ ನಿಂದನೆ | ವೀಡಿಯೋ ವೈರಲ್!!

0 comments

ಮಂಗಳೂರು:ನಗರದ ಹೊರವಲಯದ ಅಡ್ಯಾರ್ ಸಮೀಪದ ಶಾಲೆಯೊಂದರ ವಿದ್ಯಾರ್ಥಿಗಳ ನಡುವೆ ಮನಸ್ತಾಪ ಉಂಟಾದ ವಿಚಾರವೊಂದು ರಸ್ತೆಗೆ ಬಂದಿದ್ದು, ಓರ್ವ ಬಾಲಕನ ಮೇಲೆ ಯುವಕ ಹಲ್ಲೆ ನಡೆಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶಾಲೆಯಲ್ಲಿ ಓರ್ವ ವಿದ್ಯಾರ್ಥಿ ಹಾಗೂ ಇನ್ನೋರ್ವ ವಿದ್ಯಾರ್ಥಿಯ ನಡುವೆ ಜಗಳ ನಡೆದಿದ್ದು, ಈ ವಿಚಾರ ಹೆತ್ತವರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಇದೇ ವಿಚಾರವನ್ನಿಟ್ಟು ಓರ್ವ ವಿದ್ಯಾರ್ಥಿಯ ಹೆತ್ತವರು ಅಡ್ಯಾರ್ ಬಸ್ ಸ್ಟಾಂಡ್ ನಲ್ಲಿ ಇನ್ನೋರ್ವ ವಿದ್ಯಾರ್ಥಿಗೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ದಲ್ಲಿ ಓರ್ವ ಮುಸ್ಲಿಂ ಭಾಷೆ ಮಾತನಾಡುತ್ತಿದ್ದೂ, ಇನ್ನೋರ್ವ ಬುರ್ಖಾ ಧರಿಸಿದ ಮಹಿಳೆಯೂ ಸಾಥ್ ನೀಡುತ್ತಿರುವುದು ಕಂಡುಬರುತ್ತಿದೆ.

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎನ್ನುವುದನ್ನು ಕಾದುನೋಡಬೇಕಾಗಿದೆ.

You may also like

Leave a Comment