Home » ಮಂಗಳೂರು : ದ್ವಿಚಕ್ರ ವಾಹನ ಅಪಘಾತ| ವಿದ್ಯಾರ್ಥಿನಿ ದಾರುಣ ಸಾವು

ಮಂಗಳೂರು : ದ್ವಿಚಕ್ರ ವಾಹನ ಅಪಘಾತ| ವಿದ್ಯಾರ್ಥಿನಿ ದಾರುಣ ಸಾವು

0 comments

ಮಂಗಳೂರು : ವಿದ್ಯಾರ್ಥಿನಿಯೋರ್ವಳು ದ್ವಿಚಕ್ರ ವಾಹನ ಅಪಘಾತದಿಂದ ದಾರುಣವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡದಿದೆ. ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಈ ಘಟನೆ ಕೇರಳದ ಅಲಪ್ಪುಝದ ಅಲುವಾದಲ್ಲಿ ನಡೆದಿದೆ.

ಫೌಜಿಯಾ ಹಕೀಂ (21) ಮೃತ ವಿದ್ಯಾರ್ಥಿನಿ.

ಮಂಗಳೂರಿನಿಂದ ರೈಲಿನಲ್ಲಿ ಅಲುವಾ ತಲುಪಿದ ಫೌಜಿಯಾ ಸ್ಕೂಟರ್ ನಲ್ಲಿ ಮನೆಯತ್ತ ಬರುವಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವಾಗ, ಸ್ಕೂಟರ್ ನೀರಿಗೆ ಇಳಿದು ನಿಯಂತ್ರಣ ಕಳೆದುಕೊಂಡು ಬಿದ್ದಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

You may also like

Leave a Comment