Home » ಮಂಗಳೂರು : ಮಾರ್ಚ್ 3 ರಂದು ಬೃಹತ್ ಉದ್ಯೋಗಮೇಳ!!!

ಮಂಗಳೂರು : ಮಾರ್ಚ್ 3 ರಂದು ಬೃಹತ್ ಉದ್ಯೋಗಮೇಳ!!!

0 comments

ಮಂಗಳೂರು : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ‌ ಜಿಲ್ಲಾಡಳಿತ ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಮಾರ್ಚ್ 3 ರ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಎಜೆ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ‘ ಬೃಹತ್ ಉದ್ಯೋಗ ಮೇಳ’ ವನ್ನು ಆಯೋಜಿಸಲಾಗಿದೆ.

ಬಿಎ, ಬಿಎಸ್ಸಿ, ಬಿಕಾಂ, ಐಟಿಐ, ಡಿಪ್ಲೋಮಾ, ಬಿಇ ಅರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಆಸಕ್ತರು ತಮ್ಮ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಫೋಟೋ, ಆಧಾರ್ ಕಾರ್ಡ್ ಹಾಗೂ ಸ್ವವಿವರದ ಅರ್ಜಿಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು www.skillconnet.kaushalkar.com ಇಲ್ಲಿ ತಮ್ಮ‌ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಈ ಉದ್ಯೋಗಮೇಳದಲ್ಲಿ ಹೆಸರಾಂತ ಕಂಪನಿಗಳಾದ ಟೀಮ್ ಲೀಸ್, ಸಿನೋಪ್ ಟೆಕ್, ಹೆಚ್ ಜಿ ಎಸ್, ಬಿ.ಓ.ಎಸ್ ಸಿ ಹೆಚ್, ಬೈಜೂಸ್, ಟಾಟಾ ಕಮ್ಯುನಿಕೇಷನ್ಸ್, ಟೊಯೊಟಾ ಕಿರ್ಲೊಸ್ಕರ್ ಮೋಟರ್, ಎನ್ ಟಿ ಟಿ ಎಫ್ ಸೇರಿದಂತೆ 100 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತದೆ.

You may also like

Leave a Comment