Home » Mangaluru: ಚಡ್ಡಿ ಗ್ಯಾಂಗ್‌ ದರೋಡೆ ಪ್ರಕರಣ; ನಾಲ್ವರ ಬಂಧನ, ಇನ್ನೋರ್ವ ಎಲ್ಲಿ?

Mangaluru: ಚಡ್ಡಿ ಗ್ಯಾಂಗ್‌ ದರೋಡೆ ಪ್ರಕರಣ; ನಾಲ್ವರ ಬಂಧನ, ಇನ್ನೋರ್ವ ಎಲ್ಲಿ?

41 comments
Mangaluru

Mangaluru: ಇತ್ತೀಚೆಗೆ ಮಂಗಳೂರು ನಗರದಲ್ಲಿ ನಡೆದ ದರೊಡೆ ಪ್ರಕರಣದಲ್ಲಿ ಚಡ್ಡಿ ಗ್ಯಾಂಗ್‌ನಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆದರೆ ಈ ತಂಡದಲ್ಲಿ ಹಲವು ಸದಸ್ಯರು, ತಂಡಗಳು ಇದೆಯೇ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Govind Karajola: 3 ಗುಂಪುಗಳಾಗಿ ಒಡೆದುಹೋದ ರಾಜ್ಯ ಕಾಂಗ್ರೆಸ್- ಒಂದು ಸಿದ್ದರಾಮಯ್ಯದ್ದು, ಇನ್ನೊಂದು ಡಿಕೆಶಿ ಯದ್ದು, ಹಾಗಿದ್ರೆ ಮತ್ತೊಂದು ಯಾವುದು?

ಕೋಡಿಕಲ್‌ನ ಮನೆಯೊಂದರಲ್ಲಿ ನಡೆದ ಕಳ್ಳತನದ ಸಿಸಿಟಿವಿ ದೃಶ್ಯದಲ್ಲಿ ಚಡ್ಡಿ ಬನಿಯನ್‌ ಧರಿಸಿದ ಐವರ ಚಹರೆ ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ನಾಲ್ವರ ಬಂಧನ ಮಾಡಲಾಗಿದೆ. ಹಾಗಾದರೆ ಇನ್ನೋರ್ವ ಎಲ್ಲಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಈ ಎರಡೂ ಕೃತ್ಯ ಚಡ್ಡಿ ಗ್ಯಾಂಗ್‌ ಮಾಡಿದ್ದೇ ಎಂಬುವುದು ಇನ್ನೂ ಪೊಲೀಸ್‌ ತನಿಖೆಯಿಂದ ತಿಳಿಯಬೇಕಿದೆ.

ಈ ಚಡ್ಡಿಗ್ಯಾಂಗ್‌ ಯಾವ ಮನೆಯ ದರೋಡೆ ಮಾಡಬೇಕೆಂದು ಮೊದಲೇ ಸಂಚು ರೂಪಿಸಿ ಆ ಪ್ರದೇಶವನ್ನು ಇಡೀ ಸುತ್ತುತ್ತಾ , ಬಸ್‌ ನಿಲ್ದಾಣದಲ್ಲೂ ತಂಗುತ್ತಾರೆ. ಇದೇ ತಂಡದವರು ನಗರದ ಕೆಲವೆಡೆ ಬಲೂನ್‌ ಮಾರುತ್ತಾ ಇದ್ದಾರೆ ಎನ್ನಲಾಗಿದೆ. ಕೆಲವು ಸದಸ್ಯರು ಕೃತ್ಯಕ್ಕೆ ಸೂಕ್ತವಾದ ಮನೆಗಳನ್ನು ಹುಡುಕುತ್ತಾ ಇರುತ್ತಾರೆ.

ಮಂಗಳೂರಿನಲ್ಲಿ ದರೋಡೆ ಕೃತ್ಯ ನಡೆಸಿದ ಬೆನ್ನಲೇ ಈ ಗ್ಯಾಂಗ್‌ ಬೇರೆ ಕಡೆ ನಡೆಸಿದ ಕೃತ್ಯದ ಸಿಸಿ ಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ದೃಶ್ಯದಲ್ಲಿ ನಾಲ್ಕೈದು ಜನರಿದ್ದಾರೆ. ಒಬ್ಬ ದೊಡ್ಡ ಹೊಟ್ಟೆಯವನಿದ್ದಾನೆ. ಇವರ ಕೈಯಲ್ಲಿ ಚಡ್ಡಿ ಜೊತೆ ಜಾಕೆಟ್‌, ಮಂಕಿ ಕ್ಯಾಪ್‌, ವಯರ್‌ನಂತರ ವಸ್ತುವನ್ನು ಕೈನಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಇದು ಎಲ್ಲಿಯ ದೃಶ್ಯ ಎಂಬುವುದು ಇನ್ನೂ ಗೊತ್ತಾಗಿಲ್ಲ. ಈ ಗ್ಯಾಂಗ್‌ ಮಳೆಗಾಲದಲ್ಲೇ ಈ ಕೃತ್ಯ ಮಾಡುತ್ತದೆ.

ದರೋಡೆ ಮಾಡಲು ಸ್ಕೆಚ್‌ ಹಾಕುವವರು ಆ ಮನೆಯಲ್ಲಿ ಇರುವವರ ಸ್ಥಿತಿಗತಿ, ಚಲನವಲನಗಳ ಕುರಿತು ಮಾಹಿತಿ ಪಡೆಯುವ ಈ ಗ್ಯಾಂಗ್‌ಗೆ ಸ್ಥಳೀಯವಾಗಿ ಯಾರಾದರೂ ಸಹಕಾರ ನೀಡುತ್ತಿದ್ದಾರೆಯೇ? ಏಕೆಂದರೆ ಏಕಾಏಕಿ ಬಂದು ಮುಖ್ಯವಾಗಿ ಹಿರಿಯ ನಾಗರಿಕರು ಇರುವ ಮನೆಯಲ್ಲೇ ಗುರಿ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ದೃಷ್ಟಿಕೋನದಲ್ಲಿಯೂ ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ.

Maharastra: ಕೈ ಕೈ ಹಿಡಿದು, ಬೆವರುತ್ತಾ, ಅಳುತ್ತಾ ಹೋಗಿ ರೈಲಿಗೆ ತಲೆ ಕೊಟ್ಟ ತಂದೆ ಮಗ – ಅಬ್ಬಾ.. ಭಯಾನಕ ವಿಡಿಯೋ ವೈರಲ್ !!

You may also like

Leave a Comment