3
Mangaluru: ಮಂಗಳೂರು (Mangaluru) ನಗರದ ಪಡೀಲ್ ಬಸ್ ತಂಗುದಾಣದ ಬಳಿ ಗಾಂಜಾ ಸೇವನೆ ಮಾಡಿದ ಯುವಕನೋರ್ವನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕ ಅಬ್ದುಲ್ ತೌಸೀಫ್ ಎಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ತಾನು ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ ಎಂದು ತಿಳಿದು ಬಂದಿದೆ.
