Home » Mangaluru Crime News: ಬಿಜೆಪಿ ಮುಖಂಡ, ಕಾರ್ಪೋರೇಟರ್‌ ಆತ್ಮಹತ್ಯೆಗೆ ಯತ್ನ, ವಿಷ ಸೇವಿಸಿ ಕಾರಿನಲ್ಲಿ ಪತ್ತೆ!!!

Mangaluru Crime News: ಬಿಜೆಪಿ ಮುಖಂಡ, ಕಾರ್ಪೋರೇಟರ್‌ ಆತ್ಮಹತ್ಯೆಗೆ ಯತ್ನ, ವಿಷ ಸೇವಿಸಿ ಕಾರಿನಲ್ಲಿ ಪತ್ತೆ!!!

1 comment
Mangaluru Crime News

Mangaluru Crime News: ನಗರದ ಬೋಳೂರು ವಾರ್ಡ್‌ನ ಕಾರ್ಪೋರೇಟರ್‌ ಜಗದೀಶ್‌ ಶೆಟ್ಟಿ (53) ಇವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ನಡೆದಿದೆ. ಇವರ ಆರೋಗ್ಯ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಇವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಕಾರ್ಪೋರೇಟರ್‌ ಆಗಿ ಆಯ್ಕೆಯಾಗಿದ್ದರು. ಸದ್ಯಕ್ಕೆ ಇವರನ್ನು ಇದೀಗ ಅಂಬೇಡ್ಕರ್‌ ವೃತ್ತದ ಬಳಿ ಇರುವ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಜಗದೀಶ್‌ ಶೆಟ್ಟಿ ಅವರು ಗುರುವಾರ ಸಂಜೆ ನಾಲ್ಕರ ಸಮಯಕ್ಕೆ ಸ್ಟೇಟ್‌ಬ್ಯಾಂಕ್‌ ಹಾಗೂ ಬಂದು ನಡುವೆ ಇರುವ ತಾಜ್‌ ಹೋಟೆಲ್‌ ಬಳಿ ಕಾರಿನಲ್ಲಿ ಕುಳಿತು ವಿಷ ಸೇವನೆ ಮಾಡಿದ್ದಾರೆಂದು ವರದಿಯಾಗಿದೆ. ಮನೆಯವರು ಇದರಿಂದ ಸಂಶಯಗೊಂಡಿದ್ದು, ಪೊಲೀಸ್‌ ಇಲಾಖೆಯ ನೆರವಿನಿಂದ ಮೊಬೈಲ್‌ ಟವರ್‌ ಲೊಕೇಶನ್‌ ಪತ್ತೆ ಮಾಡಿದ್ದಾರೆ. ಆವಾಗ ಕಾರು ಎಲ್ಲಿರುವುದು ಎಂದು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಪ್ರಯಾಣ ಮಾಡಿದ ಪತ್ನಿ!! ಗೊತ್ತಾಗಲೇ ಇಲ್ಲ ದುರಂತ!!!

ಕೂಡಲೇ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದು, ಅವರುಗಳು ಕಾರಿನ ಬಳಿ ಬಂದಾಗ ಜಗದೀಶ್‌ ಅವರು ಅಸ್ವಸ್ಥಗೊಂಡಿರುವುದು ಪತ್ತೆಯಾಗಿದೆ. ನಂತರ ಗಾಜನ್ನು ಒಡೆದು ಜಗದೀಶ್‌ ಅವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲು ಮಾಡುವ ಮೊದಲು ವಿಷ ಸೇವನೆ ಮಾಡಲು ಸುಮಾರು ಎರಡು ಮೂರು ಗಂಟೆ ಆಗಿರಬಹುದು ಎಂದು ತಿಳಿದು ಬಂದಿದೆ.

ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

 

You may also like

Leave a Comment