Home » Mangaluru: ಹೆತ್ತ ತಾಯಿಯನ್ನು ಕೊಂದ ಮಗ ಅಂದರ್‌ !

Mangaluru: ಹೆತ್ತ ತಾಯಿಯನ್ನು ಕೊಂದ ಮಗ ಅಂದರ್‌ !

by Mallika
1 comment
Mangaluru

Mangaluru: ತಾಯಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯ ಮಗನನ್ನು ಬಜ್ಪೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ(Mangaluru). ರವಿರಾಜ್‌ ಶೆಟ್ಟಿ (33)ಎಂಬಾತನೇ ಬಂಧಿತ ಆರೋಪಿ. ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದರ್ಗಾ ನಗರದ ರತ್ನ ಶೆಟ್ಟಿ (60)ಎಂಬುವವರೇ ಅಸಹಜ ಸಾವನ್ನಪ್ಪಿರುವ ಮಹಿಳೆ.

ರತ್ನ ಶೆಟ್ಟಿ ಅವರು ಮಗ ರವಿರಾಜ್‌ ಅವರೊಂದಿಗೆ ಕಟೀಲು ದುರ್ಗಾ ನಗರದ ಬಾಲಕೃಷ್ಣ ಎಂಬುವವರ ಮನೆಯ ಬದಿಯ ಕೋಣೆಯಲ್ಲಿ ವಾಸವಿದ್ದರು. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಶುಕ್ರವಾರ ಅನಾರೋಗ್ಯದ ಕಾರಣ ಕೆಲಸಕ್ಕೆ ಹೋಗಿರಲಿಲ್ಲ. ಮಗ ರವಿರಾಜ್‌ ತಾವು ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದು, ಭಾನುವಾರ ಬೆಳಗ್ಗೆ ಮನೆಯ ಪರಿಸರದಲ್ಲಿ ವಾಸನೆ ಬರುತ್ತಿದ್ದುದರಿಂದ ಅನುಮಾನದಿಂದ ಮಹಿಳೆಯ ಕೋಣೆಯ ಕಿಟಕಿಯಲ್ಲಿ ನೋಡಿದಾಗ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಈ ನಡುವೆ ತಾಯಿಯ ಶವ ಪತ್ತೆಯಾದ ಬಗ್ಗೆ ಸ್ಥಳೀಯರಿಗೆ ಮಾಹಿತಿ ಬಂದ ಕೂಡಲೇ ಮಗ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಕೂಡಲೇ ಮಗ ಸ್ಥಳದಿಂದ ಪರಾರಿಯಾಗಲು ಪ್ರಯತ್ನಪಟ್ಟಿದ್ದಾರೆ. ಆದರೆ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ರವಿರಾಜ್‌ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಅ.27 ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ತಾಯಿಗೆ ಹುಷಾರಿಲ್ಲ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದೆ, ಕೆಲಸಕ್ಕೆ ಬರುವುದಿಲ್ಲ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದ, ಪಕ್ಕದ ಮನೆಯವರು ರಾತ್ರಿ ಬಂದ ಮನೆಗೆ ಬೀಗ ಹಾಕಲಾಗಿತ್ತು. ಅ.28ರಂದು ಬೆಳಿಗ್ಗೆ ಫೋನ್‌ನಲ್ಲಿ ರವಿರಾಜ್‌ ನಲ್ಲಿ ವಿಚಾರಿಸಿದಾಗ, ತಾಯಿಗೆ ಹುಷಾರಿಲ್ಲದ ಕಾರಣ ಸಂಬಂಧಿಕರ ಮನೆಯಲ್ಲಿ ಬಿಟ್ಟಿರುವುದಾಗಿ ಹೇಳಿದ್ದ. ಅನಂತರ ಮಹಿಳೆ ವಾಸವಿದ್ದ ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಇಣುಕಿ ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ನಂತರ ಬಜ್ಪೆ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಕೊನೆಗೆ ಮಗನನ್ನು ಬಂಧಿಸಿದ್ದು, ತಾಯಿ ಜೊತೆ ಜಗಳ ಮಾಡಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದು, ಕೊಲೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Ramalinga Reddy : KSRTC ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ !!

You may also like

Leave a Comment