Home » Mangaluru: ಚುನಾವಣಾ ಪ್ರಚಾರ; ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Mangaluru: ಚುನಾವಣಾ ಪ್ರಚಾರ; ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

3 comments
Mangaluru

Mangaluru: ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ಉಂಟಾಗಿ ಹೊಯ್‌ ಕೈ ಹಂತದವರೆಗೆ ಹೋದ ಘಟನೆಯೊಂದು ಮಂಗಳೂರಿನ ಉರ್ವದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಉರ್ವ ಚಿಲಿಂಬಿಯ ಬಾಬಾ ಮಂದಿರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಎರಡು ಪಕ್ಷಗಳ ಕಾರ್ಯಕರ್ತರ ನಡೆಉವೆ ದೇವಸ್ಥಾನದ ಬಳಿ ಚುನಾವಣಾ ಪ್ರಚಾರ ನಡೆಸುವ ವಿಚಾರ ಕುರಿತು ವಾಗ್ವಾದ ನಡೆದಿದೆ. ಬಿಜೆಪಿ ಕಾರ್ಯಕರ್ತರು ರಾಮ ನವಮಿ ಉತ್ಸವ ನಡೆಯುತ್ತಿದ್ದ ಮಂದಿರದ ಹೊರಭಾಗದಲ್ಲಿರುವ ಮುಖ್ಯ ರಸ್ತೆಯಲ್ಲಿ ಪ್ರಚಾರ ನಡೆಸುತ್ತಿದ್ದ ಸಮಯದಲ್ಲಿ ಕೈ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಾಗ್ವಾದ ನಡೆದಿದೆ.

ಇದನ್ನೂ ಓದಿ: Nestle Contraversy: ಮಕ್ಕಳಿಗೆ ಕೊಡುವ ಸೆರೆಲಾಕ್‌ನಲ್ಲಿ ಸಕ್ಕರೆ ಅಂಶ ಪತ್ತೆ; ನೆಸ್ಲೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬಯಲಾಯ್ತು ಹಲವು ಶಾಕಿಂಗ್‌ ನ್ಯೂಸ್‌

ಕೂಡಲೇ ಸ್ಥಳಕ್ಕೆ ವೇದವ್ಯಾಸ್‌ ಕಾಮತ್‌, ಮಿಥುನ್‌ ರೈ ಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಉಂಟಾಗಿದ್ದು, ನಂತರ ಪೊಲೀಸರು ಗುಂಪನ್ನು ಚದುರಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎನ್ನಲಾಗಿದೆ.

ಇದನ್ನೂ ಓದಿ: Belthangady: ಸಾಕು ನಾಯಿಯಿಂದ ಮನೆ ಮಾಲಕಿ ಮೇಲೆ ಹಠಾತ್‌ ದಾಳಿ; ತಲೆಭಾಗ ಸೀಳಿ, ಕೈಗೆ ಕಚ್ಚಿ ಗಂಭೀರ ಗಾಯ

You may also like

Leave a Comment