Mangaluru: ಕರ್ನಾಟಕ ಬ್ಯಾಂಕಿನ ಪ್ರಧಾನ ಕಚೇರಿಯ ಜನರಲ್ ಮ್ಯಾನೇಜರ್ ಒಬ್ಬರು ಕತ್ತು ಸೀಳಿ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾಗಿರುಬ ಘಟನೆಯೊಂದು ನಡೆದಿದೆ.
ಮಂಗಳೂರಿನ ಬೊಂದೇಲ್ ನಲ್ಲಿರುವ ಅಪಾರ್ಟೆಂಟಿನ
ಮನೆಯಲ್ಲಿ ಶವ ಪತ್ತೆಯಾಗಿದೆ. ಈ ಘಟನೆ ಇಂದು ಬೆಳಗ್ಗೆ ಬೆಳಿಕಿಗೆ ಬಂದಿದೆ. ಕತ್ತು ಕೊಯ್ದ ಸ್ಥಿತಿಯಲ್ಲಿ ವ್ಯಕ್ತಿ ಶವ ಕಂಡು ಬಂದಿದೆ.
ಪಂಪೆಲ್ ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದ ವಾದಿರಾಜ ಕೆ.ಎ(51) ಮೃತ ವ್ಯಕ್ತಿ.
ಬೆಳಗ್ಗೆ ಹತ್ತು ಗಂಟೆಗೆ ಮೃತರ ಪತ್ನಿ ಮಗುವಿನೊಂದಿಗೆ ಪೇರೆಂಟ್ ಮೀಟಿಂಗ್ ಗೆಂದು ಶಾಲೆಗೆ ಹೋಗಿದ್ದರು.
ಬ್ಯಾಂಕಿನ ವಾಹನ ಚಾಲಕ ವಾದಿರಾಜ್ ಅವರಿಗೋಸ್ಕರ ಕಾಯುತ್ತಿದ್ದು, ಬರದ ಕಾರಣ ಮೇಲೆ ಹೋಗಿ ನೋಡಿದಾಗ, ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನ್
ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದಾರೆ.
ಒಂದು ವರ್ಷದಿಂದ ವಾದಿರಾಜ್ ಕುಟುಂಬ ಬೋಂದೆಲ್ ಅಪಾರ್ಟ್ಂಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪಂಪುವೆಲ್ ನಲ್ಲಿ ಕರ್ನಾಟಕ ಕೇಂದ್ರ ಕಚೇರಿಯಲ್ಲಿ ವಾದಿರಾಜ್ ಅವರು ಕೆಲಸ ಮಾಡುತ್ತಿದ್ದರು.
ಇದನ್ನು ಓದಿ: ಕಾಲೇಜಿಗೆ ಹೋಗ ಹೋಗುತ್ತಲೇ ಮುಸ್ಲಿಂಗೆ ಮತಾಂತರವಾದ ಹಿಂದೂ ಯುವಕ !! ಬಯಲಾಯ್ತು ಸ್ಫೋಟಕ ಆಡಿಯೋ !!
