Home » Mangalore:ಸಿಟಿ ಬಸ್ ಅತಿ ವೇಗದ ಧಾವಂತ: ಬಸ್ ಬಾಗಿಲಿನಿಂದ ಕೆಳಕ್ಕೆ ಬಿದ್ದ ಕಂಡಕ್ಟರ್ ಸಾವು! ವೀಡಿಯೋ ವೈರಲ್

Mangalore:ಸಿಟಿ ಬಸ್ ಅತಿ ವೇಗದ ಧಾವಂತ: ಬಸ್ ಬಾಗಿಲಿನಿಂದ ಕೆಳಕ್ಕೆ ಬಿದ್ದ ಕಂಡಕ್ಟರ್ ಸಾವು! ವೀಡಿಯೋ ವೈರಲ್

2 comments
Mangalore

Mangalore : ಮಂಗಳೂರು(Mangalore) ನಗರದ ನಂತೂರು ವೃತ್ತದಲ್ಲಿ ಖಾಸಗಿ ಬಸ್ಸಿನ(Private Bus)ಬಾಗಿಲಿನಲ್ಲಿ ನೇತಾಡುತ್ತಿದ್ದ ಬಸ್‌ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಮೂಲತಃ ಬಾಗಲಕೋಟ ಜಿಲ್ಲೆಯ ನಿವಾಸಿ, ಸದ್ಯ ಸುರತ್ಕಲ್ ತಡಂಬೈಲ್ ನಲ್ಲಿ ವಾಸವಿದ್ದ ಈರಯ್ಯ (23) ಎಂಬ ವ್ಯಕ್ತಿ ಬಸ್ ನಿರ್ವಾಹಕನಾಗಿದ್ದ ಎನ್ನಲಾಗಿದೆ. 15 ನಂಬರಿನ ಬಸ್ ಕದ್ರಿ ಕೆಪಿಟಿಯಿಂದ ಬಂದು ನಂತೂರು ವೃತ್ತದಲ್ಲಿ ಏಕಾಏಕಿ ತಿರುವು ಪಡೆದ ಸಂದರ್ಭ ಎದುರು ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ನೇರವಾಗಿ ರಸ್ತೆಗೆ ಕಂಡಕ್ಟರ್ ಎಸೆಯಲ್ಪಟ್ಟಿದ್ದು ಕೂಡಲೇ ಅಲ್ಲಿದ್ದ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಯುವಕನನ್ನು ಆಸ್ಪತ್ರೆಗೆ(Hospital)ದಾಖಲು ಮಾಡಿದ್ದಾರೆ.

ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆ ಯುವಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ (death)ಎಂದು ತಿಳಿದುಬಂದಿದೆ. ಇದರ ವಿಡಿಯೋ ಎದುರಿನ ವಾಹನದಲ್ಲಿದ್ದ ಫ್ರಂಟ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್(Viral)ಆಗಿದ್ದು, ಬಸ್ ವೇಗವಾಗಿ ಚಲಿಸುತ್ತಿದ್ದ ಪರಿಣಾಮ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Sandalwood News: ಜೂ. ರಾಕಿಂಗ್ ಸ್ಟಾರ್ ಯಶ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಯತ್ನ: ಘಟನೆ ನಡೆದದ್ದು ಎಲ್ಲಿ ?

You may also like

Leave a Comment