Home » ಮಂಗಳೂರು(Mangaluru): ತಾಯಿಯ ಅಗಲುವಿಕೆಯ ವೇದನೆ , ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ

ಮಂಗಳೂರು(Mangaluru): ತಾಯಿಯ ಅಗಲುವಿಕೆಯ ವೇದನೆ , ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ

by Praveen Chennavara
0 comments

Mangaluru: ಉಳ್ಳಾಲದ ಅಸೈಗೋಳಿ ಕೆಎಸ್‌ಆರ್‌ಪಿಯ ಏಳನೇ ಬೆಟಾಲಿಯನ್‌ನ ಪೊಲೀಸ್ ಕಾನ್‌ಸ್ಟೆಬಲ್ ಅಸೈಗೋಳಿ ಸೈಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದಿದ್ದು, ಮಾನಸಿಕ ಖನ್ನತೆಯ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಬೆಳಗಾವಿ ಮೂಲದ ವಿಮಲನಾಥ ಜೈನರ್ (23) ಆತ್ಮಹತ್ಯೆ ಮಾಡಿಕೊಂಡವರು. 2021 ರ ಕೊನೆಯಲ್ಲಿ ಕೆಎಸ್‌ಆರ್‌ಪಿಗೆ ಸೇರ್ಪಡೆಯಾದ ವಿಮಲನಾಥ್‌ ತರಬೇತಿ ಮುಗಿಸಿ ಕಳೆದ ನಾಲ್ಕೈದು ತಿಂಗಳ ಹಿಂದೆ ಅಸೈಗೋಳಿಯ ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ(Mangaluru) ಕಾರ್ಯ ನಿರ್ವಹಿಸುತ್ತಿದ್ದರು.

ವರ್ಷದ ಹಿಂದೆ ತಾಯಿ ತೀರಿಕೊಂಡ ಅನಂತರ ಮಾನಸಿಕವಾಗಿ ಖನ್ನತೆಯಲ್ಲಿದ್ದ ಅವರು ರವಿವಾರ ಕರ್ತವ್ಯಕ್ಕೆ ಹಾಜರಾಗದೆ ಬಾಡಿಗೆ ಮನೆಯಲ್ಲೇ ಕೃತ್ಯ ಎಸಗಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment