4
Mangaluru: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಮನೆಯ ಹಿಂಭಾಗದಿಂದ ಯುವಕನೋರ್ವ ವೀಡಿಯೋ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಈ ಸಂದರ್ಭದಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಧರ್ಮದೇಟು ತಿಂದಿದ್ದಾನೆ ಯುವಕ. ಈ ಘಟನೆ ನಡೆದಿರುವುದು ಮಂಗಳೂರು ಸಮೀಪದ ತೋಟಬೆಂಗ್ರೆಯಲ್ಲಿ.
ಬೆಂಗ್ರೆ ನಿವಾಸಿಯಾದ ಮೊಹಮ್ಮದ ರಂಶಿದ್ (21) ಎಂಬಾತನೇ ಆರೋಪಿ. ಈತನ ಮೇಲೆ ಮಾದಕ ದ್ರವ್ಯ ವ್ಯಸನಿ ಎಂಬ ಆರೋಪ ಕೂಡಾ ಇದೆ. ಇದೀಗ ಪಣಂಬೂರು ಪೊಲೀಸರು ಈತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
