Home » ಮಂಗಳೂರು : ಮುಸ್ಲಿಂ ಯುವಕನ ಕೊಲೆಯತ್ನ

ಮಂಗಳೂರು : ಮುಸ್ಲಿಂ ಯುವಕನ ಕೊಲೆಯತ್ನ

by Praveen Chennavara
0 comments

ಮಂಗಳೂರಿನ ನೀರುಮಾರ್ಗದಲ್ಲಿ ಶುಕ್ರವಾರ ರಾತ್ರಿ ಯುವಕನೊಬ್ಬನ ಕೊಲೆಗೆ ದುಷ್ಕರ್ಮಿಗಳ ತಂಡ ಯತ್ನಿಸಿದ ಘಟನೆ ನಡೆದಿದೆ.

ನೀರುಮಾರ್ಗ ಸಮೀಪ ಪಡು ಪೋಸ್ಟ್ ಆಫೀಸ್ ಬಳಿಯ ಬಿತ್ತಪಾದೆ ಎಂಬಲ್ಲಿ ಶುಕ್ರವಾರ ರಾತ್ರಿ ಸುಮಾರು 7:30ಕ್ಕೆ ಅಡ್ಯಾರ್ ಪದವಿನ ರಿಯಾಝ್ ಅಹ್ಮದ್ (38) ಎಂಬವರಿಗೆ ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾದ ಜೀವನ್, ಕಿಶೋರ್, ಸುಜಿತ್, ಗಣೇಶ್ ಮತ್ತಿತರರು ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದುಷ್ಕರ್ಮಿಗಳು ಪಡು ಪರಿಸರದಲ್ಲಿ ರಿಯಾಝ್ ಅಹ್ಮದ್ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿದ್ದಾರೆ. ಅಲ್ಲದೆ ರಿಯಾಝ್ರನ್ನು ಮಾತಿಗೆಳೆದು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ರಿಯಾಝ್ ನ ತಲೆಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ಕೂಡಲೇ ರಿಯಾಝ್ ನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೆ ಕಾರಣ ಸ್ಪಷ್ಟಗೊಂಡಿಲ್ಲ.

ಮಲ್ಲೂರು ಕಡೆಗೆ ಕಾರಿನಲ್ಲಿ ತೆರಳಿ ಮರಳಿ ಮನೆಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಇದರಿಂದ ರಿಯಾಝ್ ತಲೆಗೆ ಕಡಿದ ಹಾಗೂ ಬಿಯರ್ ಬಾಟಲಿಯಿಂದ ಹೊಡೆದಿರುವ ಗಾಯಗಳಾಗಿವೆ. ಅಲ್ಲದೆ ಒಂದು ಕಣ್ಣಿಗೆ ಚೂಪಾದ ಆಯುಧದಿಂದ ಚುಚ್ಚಲಾಗಿದೆ. ಮತ್ತೊಂದು ಕಣ್ಣಿನ ಭಾಗಕ್ಕೆ ಕತ್ತಿಯಿಂದ ಕಡಿಯಲಾಗಿದೆ. ಹಲ್ಲೆ ನಡೆದ ಸ್ಥಳದಲ್ಲಿ ಕಬ್ಬಿಣದ ರಾಡ್, ಬಿಯರ್ ಬಾಟಲಿ ,ಮಹಿಳೆಯ ಚಪ್ಪಲ್‌ಪತ್ತೆಯಾಗಿದೆ.

You may also like

Leave a Comment