Home » ಮುಕ್ಕೂರು ಹಾಲು ಸೊಸೈಟಿ : 13 ನಾಮಪತ್ರ ಕ್ರಮಬದ್ಧ | ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನ

ಮುಕ್ಕೂರು ಹಾಲು ಸೊಸೈಟಿ : 13 ನಾಮಪತ್ರ ಕ್ರಮಬದ್ಧ | ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನ

by Praveen Chennavara
0 comments

ಸುಳ್ಯ : ಪೆರುವಾಜೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಲ್ಲಿಕೆಯಾದ 13 ನಾಮಪತ್ರದ ಪರಿಶೀಲನೆ ರವಿವಾರ ನಡೆಯಿತು. ಎಲ್ಲ ನಾಮಪತ್ರ ಕ್ರಮ ಬದ್ಧವಾಗಿದ್ದು ಸ್ವೀಕೃತಗೊಂಡಿದೆ.

ಇಂದು ನಾಮಪತ್ರ
ಹಿಂಪಡೆಯಲು ಕೊನೆಯ ದಿನ
ನಾಮಪತ್ರ ಹಿಂಪಡೆಯಲು ಮೇ 9 ಕೊನೆಯ ದಿನವಾಗಿದೆ. ಸಾಮಾನ್ಯ ಕ್ಷೇತ್ರದ 7 ಸ್ಥಾನಕ್ಕೆ 10 ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ ಮೂರು ಮಂದಿ ನಾಮಪತ್ರ ಹಿಂಪಡೆಯದಿದ್ದರೆ ಮೇ 15 ರಂದು ಚುನಾವಣೆ ನಡೆಯಲಿದೆ. ಮಹಿಳಾ ಮೀಸಲು ಸ್ಥಾನ, ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಲಿದೆ.

13 ನಾಮಪತ್ರ
ಸಾಮಾನ್ಯ ಸ್ಥಾನಕ್ಕೆ
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಸಂಘದ ನಿಕಟಪೂರ್ವ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ನಿಕಟ ಪೂರ್ವ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು, ದಯಾನಂದ ಜಾಲು, ಮಹಮ್ಮದ್ ಕುಂಡಡ್ಕ, ಕೇಶವ ಕೆ.ಎನ್.ಕಂಡಿಪ್ಪಾಡಿ, ಜನಾರ್ದನ ಗೌಡ ಕಂಡಿಪ್ಪಾಡಿ, ಪ್ರೇಮನಾಥ ರೈ, ಮಹಿಳಾ ಮೀಸಲು ವರ್ಗದ ಎರಡು ಸ್ಥಾನಗಳಿಗೆ ಸಾವಿತ್ರಿ ಚಾಮುಂಡಿಮೂಲೆ, ಸುಮಲತಾ ಮರಿಕೇಯಿ ಹಾಗೂ ಪರಿಶಿಷ್ಟ ಪಂಗಡ ಮೀಸಲಿನ ಒಂದು ಸ್ಥಾನಕ್ಕೆ ಪೂವಪ್ಪ ನಾಯ್ಕ ಅಡೀಲು ನಾಮಪತ್ರ ಸಲ್ಲಿಸಿದ್ದಾರೆ.

You may also like

Leave a Comment