Home » ಮಂಗಳೂರು : ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆ | ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

ಮಂಗಳೂರು : ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆ | ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

0 comments

ಮುಲ್ಕಿ: ಅನ್ಯ ಕೋಮಿನ ಯುವಕನೋರ್ವನ ಜೊತೆ ಯುವತಿಯೋರ್ವಳು ಪತ್ತೆಯಾಗಿದ್ದು, ಯುವಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದೆ. ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ಅನ್ಯಕೋಮಿನ ಯುವಕನ ಬಂಧನವಾಗಿದೆ. ಈ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ.

ಫಯಿಮ್ ಎಂಬಾತನೇ ಪೊಲೀಸರ ಕೈಯಲ್ಲಿ ಬಂಧಿತನಾಗಿರುವ ವ್ಯಕ್ತಿ.

ಉಡುಪಿಯ ಕಟಪಾಡಿಯಲ್ಲಿ ವಾಸ್ತವ್ಯವಿರುವ ಉತ್ತರ ಪ್ರದೇಶ ಮೂಲದ ಈತ ಕಟಪಾಡಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸಕ್ಕಿದ್ದು ತನ್ನ ಮಿತ್ರ ಗುಲ್ಬಾಮ್ ಎಂಬವರ ರೂಮ್‌ಗೆ ಬಂದಿದ್ದ. ಆ ಸಂದರ್ಭ ಕೊಲಕಾಡಿ ಮೂಲದ ಯುವತಿ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸ್ಥಳೀಯರಿಗೆ ಸಂಶಯ ಬಂದು ವಿಚಾರಿಸಿದ್ದು, ಕೂಡಲೇ ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಈ ಸಂದರ್ಭ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದ್ದು, ಸ್ಥಳೀಯರು ಆರೋಪಿಗೆ ಹಲ್ಲೆ ಮಾಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ಫಯೀಮ್ ಕಟಪಾಡಿಯಲ್ಲಿ ನೆಲೆಸಿದ್ದು , ಕಳೆದ ಕೆಲ ತಿಂಗಳ ಹಿಂದೆ ಈತ ಕಾರ್ನಾಡುವಿನಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದು ಬದಿಯಲ್ಲಿದ್ದ ಫ್ಯಾನ್ಸಿ ಸೆಂಟರ್ ನಲ್ಲಿ ಇದೇ ಯುವತಿ ಕೆಲಸ ಮಾಡುತ್ತಿರುವಾಗ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಈ ಘಟನೆಯಿಂದ ಮುಲ್ಕಿ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಠಾಣೆಯ ಹೊರಬದಿಯಲ್ಲಿ ಸಂಘಟನೆಯ ನಾಯಕರು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

You may also like

Leave a Comment