Home » ನರಿಮೊಗರು :ಭೀಕರ ಅಪಘಾತ – ತಂತ್ರಿ ಸಹಾಯಕ ಗಂಭೀರ : ಗಾಯಾಳುಗಳನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ ಅರುಣ್ ಕುಮಾರ್ ಪುತ್ತಿಲ

ನರಿಮೊಗರು :ಭೀಕರ ಅಪಘಾತ – ತಂತ್ರಿ ಸಹಾಯಕ ಗಂಭೀರ : ಗಾಯಾಳುಗಳನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ ಅರುಣ್ ಕುಮಾರ್ ಪುತ್ತಿಲ

by Praveen Chennavara
0 comments

ಪುತ್ತೂರು: ನರಿಮೊಗರು ಸಮೀಪ ರಿಕ್ಷಾ ಮತ್ತು ಆಕ್ಟಿವ ನಡುವೆ ಅಪಘಾತ ನಡೆದು ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಡಿ 27ರಂದು ಮಧ್ಯರಾತ್ರಿ ನಡೆದಿದೆ.

ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತಂತ್ರಿಯವರ ಸಹಾಯಕರಾಗಿದ್ದ ಮಧುಸೂದನ್ ಚಡಗ ಅವರು ಮಧ್ಯರಾತ್ರಿಯ ದೇವಸ್ಥಾನದಿಂದ ಅವರ ಮನೆ ಆರ್ಯಾಪು ಕಡೆ ಆಕ್ಟಿವದಲ್ಲಿ ಹೋಗುತ್ತಿದ್ದಾಗ, ಸಂಪ್ಯದಿಂದ ಭಕ್ತಕೋಡಿಗೆ ಹೋಗುತಿದ್ದ ರಝಾಕ್ ಹಾಗೂ ಅವರ ಕುಟುಂಬವಿದ್ದ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಿಂದ ಮಧುಸೂದನ್ ಅವರು ಗಂಭೀರ
ಗಾಯಗೊಂಡಿದೆ. ರಝಾಕ್ ಅವರ ಮೇಲೆಯೇ ರಿಕ್ಷಾ ಪಲ್ಟಿಯಾಗಿದೆ ಎನ್ನಲಾಗಿದೆ.ಕೂಡಲೇ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು, ಮಧುಸೂದನ್ ಹಾಗೂ ರಝಾಕ್ ಇಬ್ಬರನ್ನೂ ತನ್ನ ಕಾರಿನಲ್ಲಿ ಹಾಕಿಕೊಂಡು ಪುತ್ತೂರು ಆಸ್ಪತ್ರೆಗೆ ಸಾಗಿಸಿದರು.

2 ಕೈ ಹಾಗೂ 2 ಕಾಲಿಗೂ ಗಂಭೀರ ಸ್ವರೂಪದ ಗಾಯವಾಗಿರುವ ಮಧುಸೂದನ್ ಅವರನ್ನು ಕೂಡಲೇ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

You may also like

Leave a Comment