Home » Puttur: ರಾಷ್ಟ್ರೀಯ ಮಟ್ಟದ JAM ಪರೀಕ್ಷೆ ಸಾರ್ಯಬೀಡು ವೈಭವೀ ಶೆಟ್ಟಿಗೆ ಆಲ್ ಇಂಡಿಯಾ ರ್ಯಾಂಕ್!

Puttur: ರಾಷ್ಟ್ರೀಯ ಮಟ್ಟದ JAM ಪರೀಕ್ಷೆ ಸಾರ್ಯಬೀಡು ವೈಭವೀ ಶೆಟ್ಟಿಗೆ ಆಲ್ ಇಂಡಿಯಾ ರ್ಯಾಂಕ್!

0 comments

Puttur: ರಾಷ್ಟ್ರೀಯ ಮಟ್ಟದ ಪರೀಕ್ಷೆಯಾದ Joint Admission Test For Master(JAM) ನಲ್ಲಿ ಬೆಳೆಯೂರುಕಟ್ಟೆ ಸಾರ್ಯಬೀಡಿನ ವೈಭವೀ ಶೆಟ್ಟಿ ಆಲ್‌ ಇಂಡಿಯಾ ರ್ಯಾಂಕ್ ಪಡೆದುಕೊಂಡಿರುತ್ತಾರೆ.

ಭಾರತ ದೇಶದಿಂದ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು ವೈಭವೀ ಶೆಟ್ಟಿ ದೇಶದಲ್ಲಿ 147ನೇ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯದಲ್ಲಿ ಪ್ರಥಮ ರ್ಯಾಂಕ್‌ ಪಡೆದುಕೊಂಡು ಬೆಂಗಳೂರಿನಲ್ಲಿರುವ ಭಾರತದ ಶ್ರೇಷ್ಠ ಸಂಶೋಧನಾ ಮತ್ತು ಉನ್ನತ ಶಿಕ್ಷಣ ಸಂಸ್ಥೆಯಾದ ಐಐಎಸ್ಸಿ ಎಂ.ಎಸ್ಸಿ ಪಿಎಚ್‌ಡಿ ತರಬೇತಿ ಪಡೆಯಲು ಆಯೆ,ಯಾಗಿದ್ದಾರೆ.

ಇವರು ಪುತ್ತೂರು ಬಲ್ನಾಡು ಗ್ರಾಮದ ಬೆಳೆಯೂರುಕಟ್ಟೆ ಸಾರ್ಯಬೀಡು ಬಾಬಾ ಪ್ರಕಾಶ್ ಶೆಟ್ಟಿ ಮತ್ತು ವಾಣಿ ಶೆಟ್ಟಿ ದಂಪತಿ ಪುತ್ರಿಯಾದ ಇವರು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು: ವರದಕ್ಷಿಣೆ ಕಿರುಕುಳ ಆರೋಪ: ಪತಿ, ಮನೆಯವರ ವಿರುದ್ಧ ದೂರು!

You may also like