Home » Naveen D Padil : ನವೀನ್ ಡಿ ಪಡೀಲ್ ಗೆ ಮಾತೃವಿಯೋಗ!!!

Naveen D Padil : ನವೀನ್ ಡಿ ಪಡೀಲ್ ಗೆ ಮಾತೃವಿಯೋಗ!!!

0 comments
Naveen D Padil

Naveen D Padil : ರಂಗಕರ್ಮಿ ಮತ್ತು ನಟನೆಯ ಮೂಲಕ ಮನೆ ಮಾತಾಗಿರುವ ನವೀನ್‌ ಡಿ ಪಡೀಲ್‌( Naveen D Padil)ಅವರ ತಾಯಿ ಸೇಸಮ್ಮ ಕೋಟ್ಯಾನ್‌ ಅವರು ಭಾನುವಾರ (80) ನಗರದ ಆಸ್ಪತ್ರೆಯೊಂದರಲ್ಲಿ (Hospital)ಅಸುನೀಗಿದ್ದಾರೆ (Death) ಎಂದು ತಿಳಿದು ಬಂದಿದೆ.

ಮೃತ ಸೇಸಮ್ಮ ಅವರಿಗೆ ಇಬ್ಬರು ಪುತ್ರರಾಗಿದ್ದು, ನವೀನ್‌ , ದಯಾನಂದ ಹಾಗೂ ಮಗಳು ಮೋಹಿನಿಯವರನ್ನು ಅಗಲಿದ್ದಾರೆ. ಮೃತ ಸೇಸಮ್ಮ ಅವರು ನವೀನ್‌ ಡಿ.ಪಡೀಲ್‌ ಅವರ ಪಡೀಲ್‌ನ ಮನೆಯಲ್ಲೇ ನೆಲೆಸಿದ್ದರು.ಕಳೆದ ನಾಲ್ಕು ವರ್ಷಗಳ ಹಿಂದೆ ಅಪಘಾತದಕ್ಕೀಡಾಗಿ( Accident) ಮೂಳೆ ಮುರಿತಕ್ಕೆ ಒಳಗಾಗಿದ್ದ ಸೇಸಮ್ಮ ಅವರಿಗೆ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಗಿತ್ತು. ಇದರ ನಂತರ ಆರೋಗ್ಯದಲ್ಲಿ (Health)ಚೇತರಿಕೆ ಕೂಡ ಕಂಡು ಬಂದಿತ್ತು.

ಈ ನಡುವೆ ಕಳೆದ ಎರಡು ತಿಂಗಳಿಂದ ಆರೋಗ್ಯ ಮತ್ತೆ ಹದೆಗೆಟ್ಟಿದ್ದರ(Health Problem) ಕುರಿತು ಕುಟುಂಬದ ಮೂಲಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮೃತರ ಅಂತ್ಯಕ್ರಿಯೆ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.

You may also like

Leave a Comment