Home » ನೆಲ್ಯಾಡಿ : ಸರಣಿ ಕಳ್ಳತನ,ಆರೋಪಿಯ ಬಂಧನ

ನೆಲ್ಯಾಡಿ : ಸರಣಿ ಕಳ್ಳತನ,ಆರೋಪಿಯ ಬಂಧನ

by Praveen Chennavara
0 comments

ನೆಲ್ಯಾಡಿ: ಕಳೆದ ನವಂಬರ್ ತಿಂಗಳಿನಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಡೆದ ಸರಣಿ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ನಿವಾಸಿ ಈರಣ್ಣ ಬಂಧಿತ ಆರೋಪಿ.2021ರ ನ.9ರಂದು ನೆಲ್ಯಾಡಿ ಪೇಟೆಯಲ್ಲಿರುವ ಮಂಜುನಾಥ ತರಕಾರಿ ಅಂಗಡಿ, ಸಾಯಿ ಮೆಡಿಕಲ್, ಸಾಯಿ ಬೇಕರಿ, ಆದರ್ಶ ಫ್ಯಾನ್ಸಿ, ಸೀಗಲ್ ಅಡಿಕೆ ಅಂಗಡಿ, ಸುರಕ್ಷಾ ಫ್ಯಾನ್ಸಿ, ಟಿಂಕು ಸ್ಟೋರ್, ಅರುಣ್ ಸ್ವೀಟ್ಸ್‌ನಿಂದ ಸರಣಿ ಕಳ್ಳತನ ನಡೆದಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಹಾವೇರಿ ನಿವಾಸಿ ಈರಣ್ಣ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಇತರೇ ಕಳ್ಳತನ ಪ್ರಕರಣದ ಆರೋಪಿಯೂ ಆಗಿದ್ದು ನೆಲ್ಯಾಡಿಯಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುಮಾರ್ ಕಾಂಬ್ಳೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

You may also like

Leave a Comment