ಮಂಗಳೂರು : ಇನ್ನೆರಡು ದಿನಗಳು ಮಂಗಳೂರಿನಲ್ಲಿ ‘ಒಣ ದಿನಗಳು’. ಇನ್ನು ಎರಡು ದಿನ ಮದ್ಯ ದೊರೆಯುವುದಿಲ್ಲ. ಎಲ್ಲಾ ರೀತಿಯ ಮಧ್ಯ ನಿಷೇಧ ಜಾರಿಗೆ ಬಂದಿದೆ. ನಾಳೆಯಿಂದ ಮದ್ಯದಂಗಡಿ ಬಂದ್ ಆಗಲಿರುವ ಕಾರಣ, ಇದೀಗ ವೈನ್ ಶಾಪುಗಳು ಮತ್ತು ಮದ್ಯದಂಗಡಿಗಳಲ್ಲಿ ಪಿಡ್ಕ್ (ಮದ್ಯ) ಕೊಳ್ಳಲು ರಶ್ ಉಂಟಾಗುತ್ತಿದೆ. ಜನರು ಮುಗಿಬಿದ್ದು ಮದ್ಯ ಕೊಳ್ಳುತ್ತಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಆಚರಣೆಯ ಪ್ರಯುಕ್ತ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ: 19.08.2022 ಮತ್ತು ದಿನಾಂಕ: 20.08.2022 ರ ವೈನ್ ಶಾಪ್ ಮತ್ತು ಬಾರ್ ಗಳನ್ನು ಮತ್ತು ಎಲ್ಲಾ ವಿಧದ ಅಮಲು ಪದಾರ್ಥ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ: 19.08.2022 ರ ಬೆಳಗ್ಗೆ 6:00 ಗಂಟೆಯಿಂದ ದಿನಾಂಕ: 20.08.2022 ರ ಬೆಳಗ್ಗೆ 10:00 ಗಂಟೆಯವರೆಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ವೈನ್ ಶಾಪ್ ಮತ್ತು ಬಾರ್ ಗಳನ್ನು ಮತ್ತು ಎಲ್ಲಾ ವಿಧದ ಅಮಲು ಪದಾರ್ಥ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ.
ಮದ್ಯ ಪ್ರಿಯರು ಮದ್ಯ ಬೇಕಾದಲ್ಲಿ ಇವತ್ತೇ ಖರೀದಿಸಬೇಕಾಗಿದೆ. ಯಾಕೆಂದರೆ ನಾಳೆ ಬೆಳಿಗ್ಗೆ 6 ಗಂಟೆಯಿಂದಲೇ ಮದ್ಯ ವ್ಯಾಪಾರ ನಿಷೇಧ ಮಾಡಿದ ಕಾರಣ, ನಾಳೆ ಮದ್ಯದಂಗಡಿಗಳು ಓಪನ್ ಆಗಲಾರವು. ಅಂದರೆ ಇವತ್ತು ರಾತ್ರಿ ಮಾಡುವ ಖರೀದಿಯ ನಂತರ ಮತ್ತೆ ನಾಳಿದ್ದು 20 ತಾರೀಖಿನ ಬೆಳಿಗ್ಗೆ ಹತ್ತು ಗಂಟೆಯ ತನಕ ಕಾಯಬೇಕಾಗುತ್ತದೆ. ಅಷ್ಟು ಕಾಯಲು ತಾಳ್ಮೆಯಿಲ್ಲದ !! ಮದ್ಯದ ‘ವಿಪರೀತ ಪ್ರಿಯರು’ ಇವತ್ತೇ ಪ್ಲಾನ್ ಮಾಡಬೇಕಾಗುತ್ತದೆ.

