0
Padubidre accident: ಬಸ್ಸು, ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಜೊತೆಗೆ ನಿಂತಿದ್ದ ಆಟೋ ರಿಕ್ಷಾಗೆ ಕೂಡಾ ಬಸ್ಸು ಡಿಕ್ಕಿ ಹೊಡೆದಿರುವ ಘಟನೆಯೊಂದು ಮಂಗಳವಾರ ಸಂಜೆ ಪಡುಬಿದ್ರೆ (Padubidre accident )ಜಂಕ್ಷನ್‌ನಲ್ಲಿ ನಡೆದಿದೆ.
ಬಸ್ಸು ಕಾರ್ಕಳ ಕಡೆಗೆ ಹೋಗುತ್ತಿದು, ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು, ನಂತರ ಕಾರ್ಕಳ ರಸ್ತೆ ಬದಿ ಇರಿಸಿದ್ದ ಟ್ರಾಫಿಕ್ ಬೂತ್‌ಗೆ ಡಿಕ್ಕಿ ಹೊಡೆದು, ನಂತರ ಆಟೋ ರಿಕ್ಷಾಕ್ಕೆ ಕೂಡಾ ಡಿಕ್ಕಿ ಮಾಡಿದೆ. ರಿಕ್ಷಾ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ.

ಈ ಸರಣಿ ಅಪಘಾತದಲ್ಲಿ ಬಸ್ ನಿರ್ವಾಹಕ, ಪ್ರಯಾಣಿಕರೋರ್ವರು ಹಾಗೂ ಇಬ್ಬರು ಮಹಿಳೆಯರು ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ರಿಕ್ಷಾ ಜಖಂಗೊಂಡಿದ್ದು, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇದನ್ನೂ ಓದಿ:ವಿವಾದಿತ ಮಹಿಳಾ ಪೊಲೀಸ್ ಅಧಿಕಾರಿ ರಸ್ತೆ ಅಪಘಾತದಲ್ಲಿ ಸಾವು
