Home » ಸುಳ್ಯ ಸಮೀಪ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್!! ಮುಂದಾಗಿದ್ದೇ ಅನಾಹುತ- ನಾಲ್ವರ ಬಲಿ

ಸುಳ್ಯ ಸಮೀಪ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್!! ಮುಂದಾಗಿದ್ದೇ ಅನಾಹುತ- ನಾಲ್ವರ ಬಲಿ

by Praveen Chennavara
0 comments

ಸುಳ್ಯ: ಭೀಕರ ಅವಘಡಕ್ಕೆ ನಾಲ್ವರು ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪದ ಪರಿಯಾರಂ ಎಂಬಲ್ಲಿ ನಡೆದಿದೆ. ಕಟಾವು ಮಾಡಿದ ರಬ್ಬರ್ ಮರದ ದಿಮ್ಮಿಗಳನ್ನು ಸಾಗುಸುತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆ ವಿವರ: ಸುಳ್ಯದಿಂದ ಕೇರಳಕ್ಕೆ ರಬ್ಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯು ಪರಿಯಾರ ಎಂಬಲ್ಲಿ ತಲುಪುತ್ತಿದ್ದಂತೆ ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾಗಿದ್ದು ಲಾರಿಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ.ಲಾರಿಯಲ್ಲಿ ಒಟ್ಟು ಒಂಬತ್ತು ಮಂದಿ ಕಾರ್ಮಿಕರಿದ್ದು, ಉಳಿದವರು ಅಪಾಯ ಕಂಡು ಲಾರಿಯಿಂದ ಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೃತರನ್ನು ಮೋಹನ್, ಬಾಬು, ನಾರಾಯಣ್ ಎಂದು ಗುರುತಿಸಲಾಗಿದೆ.

You may also like

Leave a Comment