Home » ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ | ನಾಲ್ವರಿಂದ ಕೃತ್ಯ ,ಹಲವರು ವಶಕ್ಕೆ

ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ | ನಾಲ್ವರಿಂದ ಕೃತ್ಯ ,ಹಲವರು ವಶಕ್ಕೆ

0 comments

ಉಡುಪಿ : ಕಾಪು ತಾಲೂಕಿನ ಪಾಂಗಾಳದಲ್ಲಿ ರವಿವಾರ ನಡೆದ ಶರತ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಂದಿಯನ್ನು ವಶಕ್ಕೆ ಪಡೆದು ಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಕಳ ಡಿವೈಎಸ್ಪಿ ಅರವಿಂದ್‌ ಕಲಗುಜ್ಜಿ ಅವರು ಕಾಪುವಿನಲ್ಲೇ ಠಿಕಾಣಿ ಹೂಡಿ ತನಿಖೆ ತೀವ್ರಗೊಳಿಸಿದ್ದಾರೆ.
ಪ್ರಕರಣ ತನಿಖಾಧಿಕಾರಿ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ಮತ್ತವರ ತಂಡಕ್ಕೆ ಡಿವೈಎಸ್ಪಿ ಅರವಿಂದ್ ಅವರು ನಿರ್ದೇಶನ ನೀಡುತ್ತಿದ್ದಾರೆ.

ಹತ್ಯೆಯಾದ ಶರತ್‌ ಶೆಟ್ಟಿ ಅವರು ನಡೆಸುತ್ತಿದ್ದ ಭೂ ವ್ಯವಹಾರ, ಹಣದ ವಿಚಾರಕ್ಕೆ ಸಂಬಂಧಿಸಿದ ಪರಿಚಿತರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಆರೋಪಿಗಳು ನಾಲ್ವರಿದ್ದರು ಎನ್ನ ಲಾಗುತ್ತಿದ್ದು, ಮಾರಕಾಯುಧ ವನ್ನು ಹಿಡಿದುಕೊಂಡು ಪೂರ್ವ ನಿರ್ಧರಿತವಾಗಿ ಯೋಜನೆ ಹಾಕಿ ಕೊಂಡೇ ಹತ್ಯೆ ನಡೆಸಲಾಗಿರುವುದು ಸಿಸಿ ಕೆಮರಾದಲ್ಲಿ ದಾಖಲಾದ ವೀಡಿಯೋದಿಂದ ತಿಳಿದುಬರುತ್ತಿದೆ.

You may also like

Leave a Comment