Home » Breaking News | ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದ ಶಂಕಿತ ಆರೋಪಿಯ ಅಂಗಡಿಗೆ ದಾಳಿ !

Breaking News | ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದ ಶಂಕಿತ ಆರೋಪಿಯ ಅಂಗಡಿಗೆ ದಾಳಿ !

0 comments

ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಆಕ್ರೋಶವೂ ಹೆಚ್ಚುತ್ತಲೇ ಇದೆ. ಇದೀಗ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯ ಅಂಗಡಿಯನ್ನು ಪ್ರತಿಭಟನಾಕಾರರು ಹಾನಿಗೊಳಿಸಿದ ಘಟನೆ ವರದಿಯಾಗಿದೆ.

ಪೊಲೀಸರಿಂದ ಬಂಧಿಸಲ್ಪಟ್ಟ ಬೆಳ್ಳಾರೆ ಮೂಲದ ಶಫೀಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ನುಗ್ಗಿ ದಾಳಿ ಮಾಡಿದ್ದಾರೆ. ಆಕ್ರೋಶಿತರು ಅಂಗಡಿಯಲ್ಲಿದ್ದ ಟಯರ್ ಗೆ ಬೆಂಕಿ ಹಾಕಿ ಸುಟ್ಟು ಭಸ್ಮ ಮಾಡಿದ್ದಾರೆ. ಇಡೀ ಅಂಗಡಿಯನ್ನೇ ಚೆಲ್ಲಾಪಿಲ್ಲಿಯಾಗಿಸಿದ್ದಾರೆ ಎಂದು ವರದಿಯಾಗಿದೆ.

ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಬಹುತೇಕ ಅಂಗಡಿಗಳ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಇನ್ನೂ ನಾಲ್ಕೈದು ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ನುಗ್ಗಿ ಹನಿಗೊಳಿಸಿರುವ ಬಗ್ಗೆಯೂ ಹೇಳಲಾಗುತ್ತಿದೆ.

You may also like

Leave a Comment